ಕಾಶ್ಮೀರದಲ್ಲಿ ದೊಡ್ಡ ಬದಲಾವಣೆ! ಶಾ ಮಿಶನ್ ಕಾಶ್ಮೀರ!‌ ʻPoK ನಮಗೆ ಸೇರಿದ್ದುʼ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ವಿಚಾವಾಗಿ ಇದೀಗ ಮತ್ತೊಂದು ಐತಿಹಾಸಿಕ ಬಿಲ್‌ನ್ನ ಮಂಡಿಸಿದೆ. ಜಮ್ಮು ಮತ್ತು ಕಾಶ್ಮಿರ ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದೆ. ಗೃಹ ಸಚಿವ ಅಮಿತ್‌ ಶಾ ಬುಧವಾರ ಲೋಕಸಭೆಯಲ್ಲಿ ʻಜಮ್ಮು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಕಾಯ್ದೆ-2023 ಹಾಗೂ ಜಮ್ಮು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಕಾಯ್ದೆ-2023 ಅನ್ನೋ ಎರಡು ಬಿಲ್‌ಗಳನ್ನ ಮಂಡಿಸಿದ್ದಾರೆ. ಇವೆರಡನ್ನೂ ಒಟ್ಟಾಗಿ ನಯಾ ಕಾಶ್ಮೀರ್‌ ಬಿಲ್‌ಗಳು ಎನ್ನಲಾಗ್ತಿದೆ. ಅಂದ್ಹಾಗೆ ಈ ಹಿಂದೆ 2019ರಲ್ಲಿ ಮಂಡಿಸಿದ ಜಮ್ಮು ಕಾಶ್ಮೀರ ರಿಆರ್ಗನೈಸೇಷನ್‌ ಬಿಲ್‌ನಲ್ಲಿ ಜಮ್ಮುಕಾಶ್ಮೀರದ ವಿಧಾನಸಭೆ ಸೀಟ್‌ಗಳನ್ನ ಏರಿಕೆ ಮಾಡೋದಕ್ಕೆ ಜೊತೆಗೆ ಮೀಸಲಾತಿ ನೀಡೋದಕ್ಕೆ ಪ್ರಾವಿಷನ್‌ ನೀಡಲಾಗಿತ್ತು. ಇದೀಗ ಈ ಬಿಲ್‌ಗಳು ಆ ಕೆಲಸವನ್ನ ಕಂಪ್ಲೀಟ್‌ ಮಾಡಿವೆ. ಈ ಬಿಲ್‌ನಿಂದ ಜಮ್ಮು ಕಾಶ್ಮೀರ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನ 97ರಿಂದ 114ಕ್ಕೆ ಏರಿಕೆಯಾಗಿದೆ.

ಅಂದ್ರೆ ಈ ಹಿಂದೆ ಜಮ್ಮುವಿನಲ್ಲಿ 37, ಕಾಶ್ಮೀರದಲ್ಲಿ 46, ಲಡಾಖ್‌ನಲ್ಲಿ 4 ಹಾಗು PoKಯಲ್ಲಿ 24 ಸೀಟ್‌ಗಳು ಇದ್ವು. ಇದೀಗ ಲಡಾಖ್‌ ಪ್ರತ್ಯೇಕವಾಗಿದೆ. ಸೋ ಅದನ್ನ ಬಿಟ್ಟು ಜಮ್ಮುವಿನ ಸೀಟ್‌ಗಳು 6 ಹೆಚ್ಚಾಗಿ 43 ಆಗುತ್ವೆ, ಹಾಗೆ ಕಾಶ್ಮೀರದ ಸೀಟ್‌ಗಳು 1 ಹೆಚ್ಚಾಗಿ 47 ಆಗುತ್ವೆ. PoK ಸೀಟ್‌ಗಳು ಯಥಾಸ್ಥಿತಿಯಲ್ಲಿರುತ್ವೆ. ಸೋ ಒಟ್ಟು 97ರಿಂದ 114 ಆಗುತ್ವೆ. ಜೊತೆಗೆ ಇದ್ರಲ್ಲೊಂದು ಮಸೂದೆ ಜಮ್ಮು ಕಾಶ್ಮೀರ ವಿಧಾನಸಭೆಗೆ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಕಾಶ್ಮೀರದಿಂದ ವಲಸೆ ಬಂದಿರೋರನ್ನ ನಾಮನಿರ್ದೇಶನ ಮಾಡೋದಕ್ಕೆ ಅವಕಾಶ ಕೊಡುತ್ತೆ. ಹಾಗೆ ಒಂದು ಸ್ಥಾನವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ರಿಸರ್ವ್‌ ಮಾಡುತ್ತೆ. ಹೀಗಾಗಿ ಈ ಎರಡು ಸಮುದಾಯದಿಂದ ಒಟ್ಟು ಮೂವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗುವ ಮೀಸಲಾತಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ. ಅಲ್ಲದೇ ಇದ್ರಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕೂಡ ಮೀಸಲಾತಿ ಸಿಗುತ್ತೆ.

70 ವರ್ಷಗಳಿಂದ ತುಳಿತಕ್ಕೊಳಗಾಗಿರೋ ಕಾಶ್ಮೀರದ ಜನತೆಗೆ ಈ ಮಸೂದೆಗಳು ಘನತೆಯನ್ನ ತಂದು ಕೊಡುತ್ತವೆ ಅಂತ ಅಮಿತ್‌ ಶಾ ಹೇಳಿದ್ದಾರೆ. ಅಲ್ಲದೇ ನೆಹರು ಮಾಡಿದ ಎರಡು ಬ್ಲಂಡರ್‌ಗಳಿಂದ ಜಮ್ಮು ಕಾಶ್ಮೀರ ಇಷ್ಟು ವರ್ಷ ಯಾತನೆ ಅನುಭವಿಸಬೇಕಾಯ್ತು. ಮೂರು ದಿನಗಳ ಬಳಿಕ ಕದನ ವಿರಾಮ ಘೋಷಣೆ ಮಾಡಿದ್ದರೆ, ಈ ವೇಳೆಗೆ ಪಿಒಕೆ ಭಾರತದ ಭಾಗವಾಗಿ ಇರುತ್ತಿತ್ತು… ಎರಡನೆಯದು, ನಮ್ಮ ಆಂತರಿಕ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದಿದ್ದು” ಅಂತ ಮತ್ತೆ ಕಾಂಗ್ರೆಸ್‌ ಮೇಲೆ ದಾಳಿ ಮಾಡಿದ್ದಾರೆ. ಮುಂದುವರೆದು ನೆಹರು ಅವರು ಅದು ತಮ್ಮ ತಪ್ಪು ಎಂದು ಹೇಳಿದ್ದರು. ಅದು ಕೇವಲ ಪ್ರಮಾದವಲ್ಲ. ಈ ದೇಶದ ಅಷ್ಟು ದೊಡ್ಡ ಭೂಮಿಯನ್ನು ಕಳೆದುಕೊಳ್ಳುವಂತಾದ ಬ್ಲಂಡರ್ (ಮಹಾ ಅಪರಾಧ)ಅಂತ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್‌ ಸಂಸದರು ಸಭಾತ್ಯಾಗ ನಡೆಸಿದ್ದಾರೆ. ವಿರೋಧ ಪಕ್ಷಗಳ ಸಭಾತ್ಯಾಗಕ್ಕೆ ಪ್ರತಿಕ್ರಿಯಿಸಿದ ಶಾ, “ಅವರು ಮಹಾಪರಾಧ ಪದದ ಬಗ್ಗೆ ಅಷ್ಟೊಂದು ಅಸಮಾಧಾನಗೊಂಡಿದ್ದಾರೆ. ನಾನು ‘ಹಿಮಾಲಯನ್ ಬ್ಲಂಡರ್’ ಎಂದಿದ್ದರೆ, ಅವರು ರಾಜೀನಾಮೆ ನೀಡಿ ಹೊರನಡೆಯುತ್ತಿದ್ದರು” ಅಂತ ವ್ಯಂಗ್ಯ ಮಾಡಿದ್ದಾರೆ. ಇನ್ನು ಪಂಚರಾಜ್ಯ ಚುನಾವಣೆಗಳಲ್ಲಿ ಶಾಸಕರಾಗಿ ಆಯ್ಕೆಯಾದ ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌, ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಸೇರಿ 10 ಮಂದಿ ಬಿಜೆಪಿ ಸಂಸದರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply