ಯುಕ್ರೇನ್‌ ಮೇಲೆ ರಷ್ಯಾ ತೀವ್ರ ದಾಳಿ: 5 ಮಕ್ಕಳು ಸೇರಿ 26 ಸಾವು

masthmagaa.com:

ಯುಕ್ರೇನ್‌ ಮೇಲೆ ಮತ್ತೆ ರಷ್ಯಾ ತೀವ್ರದಾಳಿ ಆರಂಭಿಸಿದೆ. ಯುಕ್ರೇನ್‌ನ ಐತಿಹಾಸಿಕ ನಗರವಾಗಿರೊ ಉಮಾನ್‌ನ ವಸತಿ ಬ್ಲಾಕ್‌ ಸೇರಿದಂತೆ ಹಲವು ಕಡೆ ರಷ್ಯಾ ಭೀಕರ ದಾಳಿ ಮಾಡಿದೆ. ರಷ್ಯಾದ ದಾಳಿಗೆ 5 ಮಕ್ಕಳು ಸೇರಿ ಒಟ್ಟು 26 ಜನ ಪ್ರಾಣಬಿಟ್ಟಿದ್ದಾರೆ. ಇತ್ತ ಯುಕ್ರೇನ್‌ನ ಪರಿಸ್ಥಿತಿ ವಿಶ್ವದ ಇತರ ಭಾಗಗಳಿಗೆ ಹರಡಬಾರ್ದು ಅಂದ್ರೆ ನಮಗೆ ಶಸ್ತ್ರಾಸ್ತ್ರಗಳನ್ನ ನೀಡಿ ಅಂತ ಯುಕ್ರೇನ್‌ನ ಅಧಿಕಾರಿ ಮೈಖಿಲೋ ಪೊಡೊಲಿಯಾಕ್‌ ತಮ್ಮ ಮಿತ್ರ ರಾಷ್ಟ್ರಗಳಿಗೆ ಆಗ್ರಹಿಸಿದ್ದಾರೆ. ಅತ್ತ ರಷ್ಯಾದ 21 ಮಿಸೈಲ್‌ಗಳನ್ನ ಹಾಗೂ 2 ಡ್ರೋನ್‌ಗಳನ್ನ ಹೊಡೆದುರುಳಿಸಿರೋದಾಗಿ ಯುಕ್ರೇನ್‌ನ ರಕ್ಷಣಾ ಸಚಿವಾಲಯ ಹೇಳಿದೆ. ಇನ್ನೊಂದ್‌ ಕಡೆ ಕ್ರೈಮಿಯಾದ ಪೋರ್ಟ್‌ ಸಿಟಿ ಸೆವಾಸ್ಟೊಪೊಲ್‌ ನಗರದ ಇಂಧನ ಸಂಗ್ರಹ ಟ್ಯಾಂಕ್‌ನಲ್ಲಿ ಅತಿದೊಡ್ಡ ಬೆಂಕಿ ಅನಾಹುತ ಸಂಭವಿಸಿದೆ. ರಷ್ಯಾದ ಡ್ರೋನ್‌ ಅಟ್ಯಾಕ್‌ನಿಂದ ಈ ಘಟನೆ ಸಂಭವಿಸಿರಬಹುದು ಅಂತ ರಷ್ಯಾ ನೇಮಿಸಿರೊ ಅಲ್ಲಿನ ಗವರ್ನರ್‌ ಹೇಳಿದ್ದಾರೆ. ಜೊತೆಗೆ ಈ ಬೆಂಕಿ ಸುಮಾರು 11 ಸಾವಿರ ಚದರ ಅಡಿಯಷ್ಟು ಪ್ರದೇಶವನ್ನ ಆವರಿಸಿದೆ ಅಂತ ಹೇಳಿದ್ದಾರೆ. ಇನ್ನು ದಟ್ಟ ಹೊಗೆ ಆಕಾಶದಲ್ಲಿ ಆವರಿಸಿರೊ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply