ನಂದಿನಿ ಹಾಲು ಮತ್ತು ಮೊಸರಿನ ಬೆಲೆಯಲ್ಲಿ 2 ರೂ. ಏರಿಕೆ!

masthmagaa.com:

ಇತ್ತೀಚಿಗಷ್ಟೇ ನಂದಿನಿ ಹಾಲು ಮತ್ತು ಮೊಸರಿನ ದರವನ್ನ 3 ರೂಪಾಯಿ ಏರಿಸಿ ಕೆಎಮ್‌ಎಫ್ ಹೊರಡಿಸಿದ್ದ ಆದೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ತಾತ್ಕಾಲಿಕ ತಡೆ ನೀಡಿದ್ರು. ಇದೀಗ ಮತ್ತೆ ಈ ಕುರಿತು ಇಂದು ಸಭೆ ನಡಿಸಿದ್ದು, ಹಾಲು ಮತ್ತು ಮೊಸರಿನ ಬೆಲೆಯನ್ನ ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಸಿ ಕೆಎಂಎಫ್ ಮುಖ್ಯಸ್ಥ ಬಾಲಚಂದ್ರ ಜಾರಕಿಹೊಳಿ ಅನೌನ್ಸ್‌ ಮಾಡಿದ್ದಾರೆ. ಈ ಮೂಲಕ ಈಗ ಟೋನ್ಡ್ ಹಾಲಿನ ದರ 37 ರಿಂದ 39 ರುಪಾಯಿ ಆದ್ರೆ, ಸ್ಪೆಷಲ್ ಹಾಲಿನ ದರ 43 ರಿಂದ 45 ರೂಪಾಯಿಗೆ ಆಗಿದೆ. ಇನ್ನು ಸಮೃದ್ಧಿ ಹಾಲಿನ ದರ 48 ರಿಂದ 50 ರೂಪಾಯಿಗೆ ಏರಿದೆ. ನೂತನ ಬೆಲೆ ನಾಳೆಯಿಂದ ಜಾರಿಯಾಗಲಿದೆ.

-masthmagaa.com

Contact Us for Advertisement

Leave a Reply