ಮೋದಿ ಭದ್ರತಾ ಲೋಪ: 3 ಪೊಲೀಸರು ಸಸ್ಪೆಂಡ್‌! ಮೋದಿಯ ಜಾರ್ಖಂಡ್‌ ಭೇಟಿ ವೇಳೆ ನಡೆದಿದ್ದೇನು?

masthmagaa.com:

ಪ್ರಧಾನಿ ನರೇಂದ್ರ ಮೋದಿಯವ್ರ ಭದ್ರತ್ರೆಯಲ್ಲಿ ಲೋಪವಾಗಿರೋದ್ರಿಂದ, ಇಬ್ಬರು ಪೊಲೀಸರನ್ನ ಸಸ್ಪೆಂಡ್‌ ಮಾಡಲಾಗಿದೆ. ಬುಡಕಟ್ಟು ಜನಾಂಗದ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವ್ರ ಜನ್ಮದಿನದ ಅಂಗವಾಗಿ ಮೋದಿಯವ್ರು ಎರಡು ದಿನಗಳ ಕಾಲ ಜಾರ್ಖಂಡ್‌ ಭೇಟಿಯಲ್ಲಿದ್ರು. ಈ ವೇಳೆ ಮೋದಿಯವ್ರು ಭಗವಾನ್‌ ಬಿರ್ಸಾ ಮುಂಡಾ ಮೆಮೋರಿಯಲ್‌ ಪಾರ್ಕ್‌ಗೆ ಹೋಗ್ತಾ ಇರೋ ವೇಳೆ ಆಕಸ್ಮಿಕವಾಗಿ ಮಹಿಳೆಯೊಬ್ಳು ಓಡೋಡಿ ಬಂದು ಮೋದಿಯವ್ರ ಕಾವಲುಪಡೆ ಮುಂದೆ ನಿಲ್ತಾಳೆ. ಆದ್ರೆ ಮೋದಿಯವ್ರ ರಕ್ಷಣಾ ಪಡೆಗಳು ತಕ್ಷಣವೇ ಮಹಿಳೆಯನ್ನ ಹಿಡಿದು ಕಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ಪಿಎಂ ಭೇಟಿ ವೇಳೆ ಆಗಿದ್ದ ಕರ್ತವ್ಯ ಲೋಪದಿಂದ ಒಬ್ಬರು ಎಎಸ್‌ಐ ಮತ್ತು ಇಬ್ಬರು ಕಾನ್ಸ್ಟೇಬಲ್ಸ್‌ನ ಸಸ್ಪೆಂಡ್‌ ಮಾಡಲಾಗಿದೆ ಅಂತ ಅಲ್ಲಿನ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪೊಲೀಸರು ಮಹಿಳೆಯ ವಿಚಾರಣೆ ನಡೆಸಿದ ಬಳಿಕ, ಈಕೆ ಈ ಹಿಂದೆ ಕೂಡ ಪ್ರಧಾನಿ ಮೋದಿಯವ್ರನ್ನ ಭೇಟಿ ಮಾಡೋಕೆ ಪ್ರಯತ್ನ ಪಟ್ಟಿದ್ದಾಳೆ ಅಂತ ತಿಳಿದು ಬಂದಿದೆ. ಈಕೆ ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು, ಪತಿಯ ತಿಂಗಳ ಸ್ಯಾಲರಿ ತನ್ನ ಬ್ಯಾಂಕ್‌ ಅಕೌಂಟ್‌ಗೆ ಕ್ರೆಡಿಟ್‌ ಆಗಬೇಕನ್ನೋ ಕಾರಣಕ್ಕೆ ಮೋದಿಯವ್ರನ್ನ ಭೇಟಿ ಮಾಡಲು ಯತ್ನಿಸಿದ್ದಾಳೆ. ಈ ಹಿಂದೆ ಅಕ್ಟೋಬರ್‌ ತಿಂಗಳಲ್ಲಿ ಕೂಡ ಈಕೆ ಮೋದಿಯವ್ರನ್ನ ಮೀಟ್‌ ಆಗೋಕೆ ಅಂತಲೇ ದೆಹಲಿಗೆ ಹೋಗಿ, ಅಲ್ಲೇ 10 ದಿನಗಳ ಕಾಲ ಉಳಿದಿಕೊಂಡಿದ್ದಾಳೆ. ಆದ್ರೆ ಈ ಭೇಟಿ ವಿಫಲವಾದ ನಂತರ ರಾಷ್ಟ್ರಪತಿಯನ್ನ ಕೂಡ ಭೇಟಿ ಮಾಡೋಕೆ ಟ್ರೈ ಮಾಡಿದ್ದಾಳೆ. ನಂತರ ಅದೂ ಫಲಿಸದೇ ಇದ್ದಾಗ, ಜಾರ್ಖಂಡ್‌ನಲ್ಲಿ ಮೋದಿ ಆಗಮನ ತಿಳಿದು ಓಡ್ಕೊಂಡ್‌ ಬಂದಿದ್ದಾಳೆ. ಒಟ್ಟಾರೆಯಾಗಿ ಈ ಮಹಿಳೆ ಏಕಾಏಕಿ ಓಡಿ ಬಂದು, ಮೂವರು ಪೊಲೀಸರ ಕೆಲಸ ಕಿತ್ತುಕೊಂಡ ಹಾಗಾಯ್ತು.

-masthmagaa.com

Contact Us for Advertisement

Leave a Reply