ಕಾಶ್ಮೀರದಲ್ಲಿ ಮೂವರು ಹೈಬ್ರಿಡ್‌ ಉಗ್ರರ ಅರೆಸ್ಟ್! ಖತರ್ನಾಕ್‌ಗಳು ಮಾಡ್ತಿದ್ದೇನು ಗೊತ್ತಾ?

masthmagaa.com:

ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸರಪಂಚ್‌ನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಷ್ಕರ್ ಉಗ್ರ ಸಂಘಟನೆಯ ಮೂವರು ʻಹೈಬ್ರಿಡ್‌ʼ ಭಯೋತ್ಪಾದಕರನ್ನ ಬಂಧಿಸಲಾಗಿದೆ ಅಂತ ಪೋಲಿಸರು ಹೇಳಿದ್ದಾರೆ. ಅಂದ್ಹಾಗೆ ಈ ಹೈಬ್ರಿಡ್‌ ಭಯೋತ್ಪಾದಕರು ಅಂದ್ರೆ ಪಾರ್ಟ್‌ ಟೈಮ್‌ ಜಾಬ್‌ ತರ ಇವ್ರು ತಮ್ಮ ದಿನನಿತ್ಯದ ರೊಟೀನ್​​ ನಡುವೆಯೇ ಭಯೋತ್ಪಾದಕ ಚಟುವಟಿಕೆಗಳನ್ನ ಮಾಡಿ ಯಾವುದೇ ಕುರುಹು ಬಿಡದೇ ಮತ್ತೆ ವಾಪಾಸ್‌ ತಮ್ಮ ನಾರ್ಮಲ್‌ ಕೆಲ್ಸಕ್ಕೆ ಮರಳುತ್ತಿದ್ರು. ಅಂದ್ಹಾಗೆ ಏಪ್ರಿಲ್‌ 15ರಂದು ಈ ಉಗ್ರರು ಗೋಶ್‌ಬುಗ್‌ ಬಿಯ ಸರ್‌ಪಂಚ್‌ ಮಂಜೂರ್‌ ಅಹ್ಮದ್ ಬಂಗ್ರೂ ಅವ್ರ ಮೇಲೆ ಗುಂಡಿನ ದಾಳಿ ನಡೆಸಿದ್ರು.

-masthmaga.com

Contact Us for Advertisement

Leave a Reply