ಟರ್ಕಿಯಲ್ಲಿ ಪ್ರಬಲ ಭೂಕಂಪನ! 200ಕ್ಕೂ ಅಧಿಕ ಸಾವು!

masthmagaa.com:

ಈಗಾಗಲೇ ಭಯೋತ್ಪಾದನೆ ಹಾಗು ಯುದ್ಧಗಳಿಂದ ಜರ್ಜರಿತವಾದ ಸಿರಿಯಾ ಹಾಗು ಟರ್ಕಿಯಲ್ಲಿ ದೊಡ್ಡ ಅನಾಹುತವಾಗಿದೆ. 7.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ 500ಕ್ಕೂ ಅಧಿಕ ಜನರು ಮೃತಪಟ್ಟಿರೋ ಘಟನೆ ಟರ್ಕಿ ಹಾಗು ಸಿರಿಯಾದಲ್ಲಿ ನಡೆದಿದೆ. ಅಲ್ಲಿನ ಸ್ಥಳೀಯ ಸಮಯದ ಪ್ರಕಾರ ಬೆಳಗಿನ ಜಾವ 4.17ಕ್ಕೆ ಭೂಕಂಪ ಉಂಟಾಗಿದೆ. ಜನರು ಮನೆಯಲ್ಲಿ ಮಲಗಿದ್ದಾಗ ಭೂಕಂಪನ ಸಂಭವಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗೋದಕ್ಕೆ ಕಾರಣವಾಗಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಟರ್ಕಿಯ 7 ಪ್ರಾಂತ್ಯಗಳಲ್ಲಿ ಕನಿಷ್ಟ 119 ಜನ ಮೃತಪಟ್ಟಿದ್ರೆ, ನೆರೆಯ ಸಿರಿಯಾದಲ್ಲಿ ಕನಿಷ್ಟ 237 ಜನ ಸಾವನ್ನಪ್ಪಿದ್ದಾರೆ. ಹಾಗೂ ಕನಿಷ್ಟ 130 ಕಟ್ಟಡಗಳು ಹಾನಿಗೊಳಗಾಗಿದ್ದು, 500ಕ್ಕೂ ಅಧಿಕ ಜನ ಘಟನೆಯಲ್ಲಿ ಗಾಯಗೊಂಡಿದ್ದಾರೆ ಅಂತ ಅಲ್ಲಿನ ಡಿಸಾಸ್ಟರ್‌ ಆಂಡ್‌ ಎಮರ್ಜನ್ಸಿ ಮ್ಯಾನೇಜ್‌ಮೆಂಟ್‌ ಅಥಾರಿಟಿ ಮಾಹಿತಿ ನೀಡಿದೆ. ಭೂಕಂಪದಿಂದಾಗಿ ಹಲವಾರು ಕಟ್ಟಡಗಳು ಉರುಳಿರೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಭೂಕಂಪನದ ಕೇಂದ್ರಬಿಂದು ಟರ್ಕಿಯ ದಕ್ಷಿಣದಲ್ಲಿರೊ Kahramanmaras ನಗರದಲ್ಲಿ 10 ಕಿಲೋ ಮೀಟರ್‌ ಆಳದಲ್ಲಿ ಕಂಡುಬಂದಿದೆ ಅಂತ ಜರ್ಮನಿಯ ಜಿಯೋಸೈನ್ಸಸ್‌ ರಿಸರ್ಚ್‌ ಸೆಂಟರ್ ಹೇಳಿದೆ. ರಕ್ಷಣೆ ಕಾರ್ಯಾಚರಣೆಯನ್ನ ನಡೆಸಲಾಗ್ತಿದೆ. ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಹೆಚ್ಚಿನ ಹಾನಿ ಇಲ್ದೇ ಎಲ್ಲರೂ ಈ ವಿನಾಶದಿಂದ ಹೊರಬರ್ತೀವಿ ಅಂತ ಟರ್ಕಿ ಅಧ್ಯಕ್ಷ ತಾಯಿಪ್‌ ಎರ್ಡೋಆನ್‌ ಹೇಳಿದ್ದಾರೆ. ಇನ್ನು ಇದು ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದು ಎನ್ನಲಾಗಿದೆ. ಇತ್ತ ಘಟನೆಯಲ್ಲಿ ಮೃತಪಟ್ಟ ಕುಂಟುಂಬಗಳಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವ್ರು ಬೇಗ ಗುಣಮುಖರಾಗಲಿ. ಭಾರತ ಟರ್ಕಿ ಜನರ ಜೊತೆಗಿದೆ. ಈ ಸಮಯದಲ್ಲಿ ಯಾವುದೇ ಸಹಾಯ ಮಾಡೋಕೆ ಭಾರತ ರೆಡಿಯಿದೆ ಅಂತ ಮೋದಿ ಟ್ವೀಟ್‌ ಮಾಡಿದ್ದಾರೆ. ಇನ್ನು ಟರ್ಕಿ ಅತ್ಯಂತ ಸಕ್ರಿಯ ಭೂಕಂಪನ ವಲಯಗಳಲ್ಲಿರೋ ದೇಶವಾಗಿದ್ದು, ಆವಾಗಾವಾಗ ಭೂಕಂಪಗಳು ಆಗ್ತಾನೆ ಇರುತ್ತವೆ. ಅಂದ್ಹಾಗೆ 1999ರಲ್ಲಿ 7.4 ತೀವ್ರತೆಯ ಭೂಕಂಪನ ಉಂಟಾಗಿ, 17 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ರು. ಅದು ಇಲ್ಲಿವರೆಗಿನ ಅತ್ಯಂತ ವಿನಾಶಕಾರಿ ಭೂಕಂಪ ಅಂತ ಕರೆಸಿಕೊಂಡಿದೆ.

-masthmagaa.com

Contact Us for Advertisement

Leave a Reply