ಭ್ರಷ್ಟಾಚಾರ ಕೇಸ್‌ಗೆ ಸಂಬಂಧಿಸಿದಂತೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ಗೆ ರಿಲೀಫ್‌ ನೀಡಿದ ATC ಕೋರ್ಟ್‌!

masthmagaa.com:

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ರ ಜಮಾನ್‌ ಪಾರ್ಕ್‌ ನಿವಾಸದಲ್ಲಿ 30ರಿಂದ 40 ಉಗ್ರರು ಆಶ್ರಯ ಪಡೆಯುತ್ತಿದ್ದಾರೆ ಅಂತ ಆರೋಪಿಸಲಾಗಿತ್ತು. ಇದೀಗ ವಿಷಯ ಬಯಲಾಗ್ತಿದ್ದಂತೆ ಉಗ್ರರು ನಿವಾಸದಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಈ ವೇಳೆ ಒಟ್ಟು 14 ಶಂಕಿತ ಭಯೋತ್ಪಾದಕರನ್ನ ಬಂಧಸಿರುವುದಾಗಿ ಅಲ್ಲಿನ ಪಂಜಾಬ್‌ ಪೊಲೀಸರು ಹೇಳಿದ್ದಾರೆ. ಬಂಧಿತರು ಕೋರ್‌ ಕಮಾಂಡರ್‌ ನಿವಾಸ ಧ್ವಂಸ ಮತ್ತು ದಾಳಿ ಕೇಸ್‌ನಲ್ಲಿ ಭಾಗಿಯಾಗಿದ್ರು ಅಂತ ಪೊಲೀಸರು ತಿಳಿಸಿದ್ದಾರೆ. ಅಂದ್ಹಾಗೆ ಮನೆಯಲ್ಲಿ ಅಡಗಿರೋ ಶಂಕಿತ ಉಗ್ರರನ್ನ ಹಸ್ತಾಂತರ ಮಾಡಿ ಅಂತ 24 ಗಂಟೆ ಗಡುವು ನೀಡಲಾಗಿತ್ತು. ಆದ್ರೆ ಭಯೋತ್ಪಾದಕರನ್ನು ಹಸ್ತಾಂತರಿಸದ ಕಾರಣ ಖಾನ್ ಅವರ ಜಮಾನ್ ಪಾರ್ಕ್ ನಿವಾಸದ ಮೇಲೆ ಯಾವುದೇ ಸಮಯದಲ್ಲಿ ಕ್ರಮ ಕೈಗೊಳ್ಳಬಹುದು ಅಂತ ಪೊಲೀಸರು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply