ದೇಶದಲ್ಲಿ 24 ಗಂಟೆಗಳಲ್ಲಿ 640 ಫ್ರೆಶ್‌ ಕೋವಿಡ್‌ ಕೇಸ್‌ಗಳು ಪತ್ತೆ!

masthmagaa.com:

ದೇಶದಲ್ಲಿ ಕೋವಿಡ್‌ ಕಾಟ ದಿನದಿಂದ ದಿನಕ್ಕೆ ಕ್ರಮೇಣವಾಗಿ ಹೆಚ್ಚಾಗ್ತಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 640 ಹೊಸ ಕೋವಿಡ್‌-19 ಕೇಸ್‌ಗಳು ಪತ್ತೆ ಆಗಿವೆ. ಈ ಪೈಕಿ ಕರ್ನಾಟದಲ್ಲಿ 24 ಹೊಸ ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ. ಆದ್ರಿಂದ ಕೆಲ ಮೂಲಗಳ ಪ್ರಕಾರ ಜನವರಿ ಮೊದಲ ವಾರದಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕೋವಿಡ್‌ ಗೈಡ್‌ಲೈನ್ಸ್‌ ಹೇರೋ ಚ್ಯಾನ್ಸಸ್‌ ಇದೆ ಅಂತ ಹೇಳಲಾಗ್ತಿದೆ. ಇನ್ನು ಕೇರಳದಲ್ಲಿ 265 ಹೊಸ ಕೋವಿಡ್‌ ಕೇಸ್‌ಗಳು ರಿಪೋರ್ಟ್‌ ಆಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ರಾಜಸ್ಥಾನದಲ್ಲಿ 5 ಜನ ಕೋವಿಡ್‌ ಸೋಂಕಿತರು ಪತ್ತೆಯಾಗಿದ್ದು, ಒಬ್ಬ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿರೋದು ವರದಿಯಾಗಿದೆ. ಜೊತೆಗೆ ಪಶ್ಚಿಮ ಬಂಗಾಳದಲ್ಲಿ 5 ಕೋವಿಡ್‌ ಕೇಸ್‌ಗಳು ಮತ್ತು ಗುಜರಾತ್‌ನಲ್ಲಿ 11 ಕೇಸ್‌ಗಳು ರಿಪೋರ್ಟ್‌ ಆಗಿವೆ.

ಈ ಮೂಲಕ ಇದೀಗ ಒಟ್ಟು ಸೋಂಕಿತರ ಸಂಖ್ಯೆ ಅಂದ್ರೆ ಕೋವಿಡ್‌ ಶುರುವಾದಾಗಿನಿಂದ ಇದುವರೆಗೆ 4.50 ಕೋಟಿ ತಲ್ಪಿದೆ. ಕೋವಿಡ್‌ ಆ್ಯಕ್ಟಿವ್‌ ಕೇಸ್‌ಗಳ ಸಂಖ್ಯೆ 2,669 ರಿಂದ 2,997ಕ್ಕೆ ಜಾಸ್ತಿಯಾಗಿದೆ. ಸಧ್ಯ ದೇಶದಲ್ಲಿ ಕೋವಿಡ್‌ ರಿಕವರಿ ರೇಟ್‌ 98.81% ಇದ್ರೆ, ಸಾವಿನ ರೇಟ್‌ 1.19% ಇದೆ ಅಷ್ಟೇ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply