masthmagaa.com:
ಅಡುಗೆ ಮನೆಯನ್ನೇ ನಶಾ ವಸ್ತು ತಯಾರಿಸೋ ಕಾರ್ಖಾನೆಯನ್ನಾಗಿ ಮಾಡಿಕೊಂಡಿದ್ದ ನೈಜೀರಿಯಾದ ಪ್ರಜೆಯೊಬ್ಬನ್ನ ಸಿಸಿಬಿಯ ನಾರ್ಕೋಟಿಕ್ಸ್ ವಿಭಾಗದ ಅಧಿಕಾರಿಗಳು ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ. ಬೆಂಜಮಿನ್ ಅನ್ನೊ ನೈಜೀರಿಯಾ ಪ್ರಜೆ ತನ್ನ ಮನೆಯ ಕಿಚನ್ನಲ್ಲಿ ಕಚ್ಚಾ ಪದಾರ್ಥ ಬಳಸಿಕೊಂಡು ಸ್ಟೌ ಮೇಲಿಟ್ಟು ಬೆಂಕಿ ಹೊತ್ತಿಸಿ, ದೋಸೆಯ ರೀತಿ ಮಾಡಿಕೊಳ್ತಿದ್ದ. ಆ ಬಳಿಕ ಪ್ರೆಶರ್ ಕುಕ್ಕರ್ಗೆ ಪೈಪ್ ಅಳವಡಿಸಿ ಆವಿಯಿಂದ ಕ್ರಿಸ್ಟಲ್ ಬರುವಂತೆ ಮಾಡಿ ನಶಾವಸ್ತು ತಯಾರು ಮಾಡ್ತಿದ್ದ ಅಂತ ತಿಳಿದು ಬಂದಿದೆ. ಬಂದಿತ ಆರೋಪಿಯಿಂದ ಸುಮಾರು 10 ಕೋಟಿ ರೂಪಾಯಿ ಮೌಲ್ಯದ 5 ಕೆಜಿ ನಶಾವಸ್ತು ಮತ್ತು ಅದನ್ನು ತಯಾರು ಮಾಡಲು ಬೇಕಾಗಿದ್ದ 5 ಕೆಜಿ ಕಚ್ಚಾವಸ್ತುಗಳನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
-masthmagaa.com
Contact Us for Advertisement