masthmagaa.com:
ಕೊರೋನಾ ಲಸಿಕೆ ಪಡೆದ ಬಳಿಕ ಅದು ಎಷ್ಟು ದಿನ ನಮಗೆ ರಕ್ಷಣೆ ನೀಡುತ್ತೆ ಅನ್ನೋ ಪ್ರಶ್ನೆ ಸಾಕಷ್ಟು ಜನರಿಗೆ ಇರುತ್ತೆ. ಅಮೆರಿಕದ ಮೊಡೆರ್ನಾ ಕಂಪನಿಯ ಲಸಿಕೆ ಎರಡನೇ ಡೋಸ್ ಹಾಕಿಸಿಕೊಂಡ 6 ತಿಂಗಳ ಬಳಿಕವೂ ರಕ್ಷಣೆ ನೀಡುತ್ತಿದೆ ಅಂತ ಕಂಪನಿ ಹೇಳಿಕೊಂಡಿದೆ. ಜೊತೆಗೆ ತನ್ನ ಲಸಿಕೆ ಈ ಹಿಂದೆ ಇದ್ದಂತೇ 90 ಪರ್ಸೆಂಟ್ಗೂ ಹೆಚ್ಚು ಪರಿಣಾಮಕಾರಿ ಅಂತಾನೂ ಹೇಳಿದೆ. ಅಲ್ಲದೆ ರೂಪಾಂತರಿ ಕೊರೋನಾ ವೈರಾಣುವಿನಿಂದಲೂ ರಕ್ಷಣೆ ನೀಡಬಲ್ಲ ಲಸಿಕೆ ಬಗ್ಗೆ ಪರೀಕ್ಷೆ ನಡೆಸುತ್ತಿದ್ದೇವೆ ಅಂತ ಮೊಡೆರ್ನಾ ಕಂಪನಿ ಹೇಳಿದೆ. ಲಸಿಕೆ ಬಗ್ಗೆ ಮೊಡೆರ್ನಾ ಕಂಪನಿ ತನ್ನ ಹೂಡಿಕೆದಾರರಿಗೆ ಆಗಾಗ ಮಾಹಿತಿ ನೀಡ್ತಾ ಇರುತ್ತೆ. ಈ ವೇಳೆ ಈ ವಿಚಾರವನ್ನ ಹೇಳಿದೆ.
-masthmagaa.com
Contact Us for Advertisement