masthmagaa.com:
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಗಾಗ ಹೊಸ ಹೊಸ ಸ್ಟೈಲ್ ಮಾಡ್ತಾನೇ ಇರ್ತಾರೆ. ಈಗ ಜನ ಅವರ ಲೆದರ್ ಕೋಟ್ನ್ನು ಕಾಪಿ ಮಾಡೋಕೆ ಶುರು ಮಾಡ್ತಿರೋದು ಜಾಸ್ತಿಯಾಗ್ತಿದ್ದು, ಇದರಿಂದ ಕಿಮ್ ಸಾಹೇಬ್ರಿಗೆ ಭಾರಿ ಬೇಜಾರಾಗಿದೆ. ಹೀಗಾಗಿ ಇಡೀ ಉತ್ತರ ಕೊರಿಯಾದಲ್ಲಿ ಕಿಮ್ ಜಾಂಗ್ ಉನ್ ಧರಿಸುವಂತಹ ಲೆದರ್ ಕೋಟ್ ಯಾರೂ ಬಳಸುವಂತಿಲ್ಲ ಅಂತ ಆದೇಶಿಸಲಾಗಿದೆ. ಕಿಮ್ ಜಾಂಗ್ ಉನ್ಗೆ ಈ ಲೆದರ್ ಜಾಕೆಟ್ ಅಂದ್ರೆ ತುಂಬಾ ಇಷ್ಟ.. 2019ರಲ್ಲಿ ಮೊದಲ ಬಾರಿಗೆ ಕಿಮ್ ಜಾಂಗ್ ಉನ್, ಈ ರೀತಿ ಜಾಕೆಟ್ ಹಾಕಿಕೊಳ್ಳಲು ಶುರು ಮಾಡಿದ್ರು. ಇದನ್ನು ಕಂಡ ಸ್ವಲ್ಪ ದುಡ್ಡಿರೋ ಜನ ಕಿಮ್ಗೆ ಬಕೆಟ್ ಹಿಡಿಯೋಕೋ ಅಥವಾ ಸ್ಟೈಲ್ಗೋ ಅದೇ ರೀತಿ ಕೋಟ್ ಧರಿಸಲು ಶುರು ಮಾಡಿದ್ರು. ಆದ್ರೀಗ ಇಂಥಾ ಕೋಟ್ಗಳನ್ನು ಮಾರೋ ಅಂಗಡಿಗಳನ್ನೇ ಬಂದ್ ಮಾಡಲಾಗಿದ್ದು, ಮಾರಾಟಗಳನ್ನು ತಡೆಯಲು ಫ್ಯಾಷನ್ ಪೊಲೀಸರನ್ನು ನಿಯೋಜಿಸಲಾಗಿದೆ. ಬರೀ ಮಾರಾಟ ಮಾತ್ರ ಬಂದ್ ಮಾಡಿರೋದಲ್ಲ. ಈ ರೀತಿಯ ಕೋಟ್ ಹೊಂದಿರೋರು ಕೂಡ ಅದನ್ನು ಧರಿಸದಂತೆ ತಡೆಯಲಾಗ್ತಿದೆ. ದೇಶದಲ್ಲಿ ಎಲ್ಲರೂ ಈ ರೀತಿ ಲೆದರ್ ಕೋಟ್ ಹಾಕಿದ್ರೆ ತನ್ನ ಶಕ್ತಿ ಕಡಿಮೆಯಾಗುತ್ತೆ ಅನ್ನೋದು ಕಿಮ್ ಜಾಂಗ್ ಉನ್ಗೆ ಕಾಡ್ತಿರೋ ಭಯ ಅಂತ ಹೇಳಲಾಗ್ತಿದೆ. ಹೀಗಾಗಿಯೇ ಅಲ್ಲಿನ ಪೊಲೀಸರು, ದೇಶದ ಮುಖ್ಯ ನಾಯಕನ ರೀತಿ ಬಟ್ಟೆ ಧರಿಸೋದು ಅವರ ಅಧಿಕಾರಕ್ಕೆ ಸವಾಲೆಸೆದಂತೆ.. ಅದು ತಪ್ಪು ಅಂತ ಹೇಳ್ತಿದ್ದಾರೆ.
-masthmagaa.com
Contact Us for Advertisement