ಆಸ್ಪತ್ರೆಗೆ ಹೋಗಲು ದಾರಿ ಇಲ್ಲದೆ ಹುಟ್ಟಿದ ಅವಳಿ ಮಕ್ಕಳು ಧಾರುಣ ಅಂತ್ಯ!

masthmagaa.com:

ಆಸ್ಪತ್ರೆಗೆ ಹೋಗಲು ಸರಿಯಾದ ಹಾದಿ ಇಲ್ಲದೆ ಹುಟ್ಟಿದ ನವಜಾತ ಅವಳಿ ಶಿಶುಗಳು ತಾಯಿಯ ಕಣ್ಣೆದುರೆ ಮೃತ ಪಟ್ಟ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ಪಾಲ್ಘರ್‌ ಜಿಲ್ಲೆಯ ಮೊಖಾಡ ತಹಸಿಲ್‌ನ ನಿವಾಸಿಯಾಗಿರುವ ವಂದನ ಬುಧರ್‌ ಎಂಬ ಮಹಿಳೆ ಏಳು ತಿಂಗಳು ಆದ ಕೂಡಲೆ ಮನೆಯಲ್ಲೆ ಎರಡು ಮಕ್ಕಳಿಗೆ ಜನ್ಮ ನೀಡಿದ್ಲು. ಆದ್ರೆ ಅವಧಿ ಪೂರ್ವ ಹುಟ್ಟಿದ ಕಾರಣ ಮಗು ತುಂಬಾ ವೀಕ್‌ ಆಗಿದ್ದು, ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದೆ ತಾಯಿಯ ಕಣ್ಣೆದುರೆ ಮಕ್ಕಳು ಸತ್ತು ಹೋಗಿದ್ದಾರೆ. ಮಹಿಳೆಗೂ ಹೆರಿಗೆಯ ನಂತ್ರ ತೀವ್ರ ರೀತಿಯಲ್ಲಿ ರಕ್ತ ಸ್ರಾವ ಆಗ್ತ ಇತ್ತು. ಕೊನೆಗೆ ತಾಯಿಯನ್ನ ಮನೆಯಲ್ಲಿದ್ದ ಹಾಸಿಗೆ ಬೆಡ್‌ ಶೀಟ್‌ ಬಳಸಿ, ಸುಮಾರು 3 ಕಿಲೋಮೀಟರ್‌ತನಕ ಇಳಿಜಾರು, ಕಲ್ಲಿನದಾರಿಯಲ್ಲಿ ಹೊತ್ತುಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಆಯ್ತು. ಈ ಸಂದರ್ಭದಲ್ಲಿ ಏನೇನೊ ಕೆಲಸ ಕಾರ್ಯಗಳು ನಡೆದ್ವು. ಆದ್ರೆ ದೇಶದಲ್ಲಿ ಇನ್ನು ಕೂಡ ಕೆಲವು ಕಡೆ ಸರಿಯಾದ ರಸ್ತೆ ಇಲ್ಲ, ಇಂತಹ ಘಟನೆಗಳು ನಡೆಯುತ್ವೆ ಅಂದ್ರೆ ಆಶ್ಚರ್ಯದ ಸಂಗತಿ.

-masthmagaa.com

Contact Us for Advertisement

Leave a Reply