masthmagaa.com:
53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ವನ್ನ ಇದೇ ನವಂಬರ್ 20ರಿಂದ 28 ರವರೆಗೆ ಆಯೋಜಿಸಲಾಗಿದೆ. ಗೋವಾದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸ್ಪ್ಯಾನಿಷ್ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸೌರಾ ಅವ್ರಿಗೆ ಸತ್ಯಜೀತ್ ರೇ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ. ʻರೆಟ್ರೋಸ್ಪೆಕ್ಟಿವ್ಸ್ʼ ವಿಭಾಗದಲ್ಲಿ ನಿರ್ದೇಶಕ ಸೌರಾ ಅವರ ಕೆಲ ಅತ್ಯುತ್ತಮ ಚಲನಚಿತ್ರಗಳನ್ನ ಪ್ರದರ್ಶಿಸಲಾಗುತ್ತೆ ಅಂತ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ. ಜೊತೆಗೆ 52ನೇ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತೆ ಆಶಾ ಪಾರೇಖ್ ಅವ್ರ ಮೂರು ಚಿತ್ರಗಳನ್ನ ಪ್ರದರ್ಶಿಸಿ ಗೌರವ ನೀಡಲಾಗುತ್ತೆ ಅಂತ ಪ್ರಕಟಣೆಯಲ್ಲಿ ಹೇಳಲಾಗಿದೆ. ಇನ್ನು ಈ ವರ್ಷದ ʻಕಂಟ್ರಿ ಆಫ್ ಫೋಕಸ್ʼ ಆಗಿ ಫ್ರಾನ್ಸ್ನ್ನ ಆಯ್ಕೆ ಮಾಡಲಾಗಿದೆ ಅಂತ ಕೇಂದ್ರ ಸಚಿವ ಅನುರಾಗ್ ಥಾಕೂರ್ ಹೇಳಿದ್ದಾರೆ.
-masthmagaa.com
Contact Us for Advertisement