24ನೆ ವಯಸ್ಸಿಗೇ ನಿವೃತ್ತಿ ಘೋಷಿಸಲು ಮುಂದಾದ ಅಫ್ಘಾನಿಸ್ತಾನ ಕ್ರಿಕೆಟರ್‌ ನವೀನ್‌ ಉಲ್‌ ಹಕ್‌!

masthmagaa.com:

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಗೆ ಬಾಂಗ್ಲಾದೇಶ ತನ್ನ ತಂಡವನ್ನ ಪ್ರಕಟಿಸಿದೆ. ಆದ್ರೆ ವಿಶ್ವಕಪ್‌ ಆಯ್ಕೆಯ ನಿರೀಕ್ಷೆಯಲ್ಲಿದ್ದ ಮಾಜಿ ನಾಯಕ ತಮೀಮ್‌ ಇಕ್ಬಾಲ್‌ಗೆ ತಂಡದಲ್ಲಿ ಅವಕಾಶ ನೀಡಿಲ್ಲ. ತಮೀಮ್‌ಗೆ ಇಂಜುರಿಯಾಗಿರುವ ಕಾರಣ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ ಅಂತ ಬಾಂಗ್ಲಾದೇಶ ಕ್ರಿಕಿಟ್‌ ಬೋರ್ಡ್‌ ಹೇಳಿದೆ. ಆದ್ರೆ ತಮೀಮ್‌ ಮಾತ್ರ, ನಾನು ಫಿಟ್‌ ಆಗೆ ಇದೀನಿ. ಆದ್ರೆ BCB ಅಧಿಕಾರಿಗಳು ನನಗೆ ಮಿಡಲ್‌ ಆರ್ಡರ್‌ನಲ್ಲಿ ಆಡು ಇಲ್ಲಾ ಸ್ಕಿಪ್‌ ಮಾಡುವಂತೆ ಕೇಳಿದರು. ಹೀಗಾಗಿ ಟೀಮ್‌ನಲ್ಲಿ ನನ್ನ ಕನ್ಸಿಡರ್‌ ಮಾಡ್ಬೇಡಿ ಅಂತ ಹೇಳಿದ್ದೆ. ಆದ್ರೆ ಈಗ ಇಂಜುರಿ ಅನ್ನೋ ನೆಪ ಹೇಳಿದ್ದಾರೆ ಅಂತ ತಮೀಮ್‌ ಹೇಳಿಕೊಂಡಿದ್ದಾರೆ. ಇತ್ತ ತಮೀಮ್‌ ಹೇಳಕೆಗೆ ಪ್ರತಿಕ್ರಿಯಿಸಿರುವ ಬಾಂಗ್ಲಾ ಟೀಮ್‌ ನಾಯಕ ಶಕೀಬ್‌ ಅಲ್‌ ಹಸನ್‌, ತಮೀಮ್‌ ಚೈಲ್ಡಿಶ್‌ ಆಗಿ ಬಿಹೇವ್‌ ಮಾಡ್ತಿದ್ದು, ಅವರಿಗೆ ತಂಡಕ್ಕಿಂತ ಸ್ವ ಹಿತಾಸಕ್ತಿನೇ ಹೆಚ್ಚಾಗಿದೆ ಅಂತ ಟೀಕೆ ಮಾಡಿದ್ದಾರೆ. ಜೊತೆಗೆ ಈ ವಿಶ್ವಕಪ್‌ ನಂತ್ರ ಮೂರು ಮಾದರಿ ಕ್ರಿಕೆಟ್‌ಗೂ ವಿದಾಯ ಹೇಳೋದಾಗಿ ತಿಳಿಸಿದ್ದಾರೆ. ಇನ್ನೊಂದ್‌ ಕಡೆ ಕೊಹ್ಲಿ ಜೊತೆ ಕಿರಿಕ್‌ ಮಾಡ್ಕೊಂಡಿದ್ದ ಅಫ್ಘಾನಿಸ್ತಾನದ ಯುವ ಬೌಲರ್‌, ನವೀನ್‌ ಉಲ್‌ ಹಕ್‌ ವಿಶ್ವಕಪ್‌ ಬಳಿಕ ಏಕದಿನ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದಾಗಿ ಅನೌನ್ಸ್‌ ಮಾಡಿದ್ದಾರೆ. 24 ವರ್ಷದ ನವೀನ್‌ 2016ರಲ್ಲಿ ODI ಡೆಬ್ಯುಟ್‌ ಮಾಡಿದ್ದರು.

-masthmagaa.com

Contact Us for Advertisement

Leave a Reply