ಏಷ್ಯಾಕಪ್‌: ಬಾಂಗ್ಲಾ ಮಣಿಸಿ ಸೂಪರ್‌-4 ಹಂತಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಅಫ್ಘಾನ್‌

masthmagaa.com:

ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶವನ್ನ ಮಣಿಸುವ ಮೂಲಕ ಅಫ್ಘಾನ್‌ ಪಡೆ ಸೂಪರ್‌-4 ಹಂತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದೆ. ಯುಎಇನ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾವನ್ನ ಅಫ್ಘಾನ್‌ 127 ರನ್‌ಗಳ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು. ಆದ್ರೆ ಚೇಸಿಂಗ್‌ ಆರಂಭಿಸಿದ ಅಫ್ಘಾನ್‌ ಕುಂಟುತ್ತಾ ಸಾಗಿತ್ತು. ಒಂದು ಹಂತದಲ್ಲಿ ಎಲ್ಲಿ ಬಾಂಗ್ಲಾ ಅನಾಯಾಸವಾಗಿ ಗೆದ್ದುಬಿಡುತ್ತೋ ಅನ್ಸಿತ್ತು. ಆದ್ರೆ ನಂತ್ರ ಬಂದ ಲೆಫ್ಟ್‌ ಅಫ್ಘಾನ್‌ನ ಹ್ಯಾಂಡೆಡ್‌ ಬ್ಯಾಟರ್‌ ನಜೀಬುಲ್ಲಾ ಜದ್ರಾನ್‌ ಕೇವಲ 17 ಬಾಲ್‌ಗಳಲ್ಲಿ ಆರು ಸಿಕ್ಸರ್‌ ಮತ್ತು ಒಂದು ಬೌಂಡರಿ ಒಳಗೊಂಡಂತೆ 43 ರನ್‌ ಬಾರಿಸಿದ್ರು. ಈ ಮೂಲಕ ಅಫ್ಘಾನ್‌ ಇನ್ನೂ 1.3 ಓವರ್‌ ಇರುವಂತೆಯೇ ಗುರಿ ಮುಟ್ಟಿ ಸೂಪರ್‌-4 ಪ್ರವೇಶಿಸ್ತು. ʻಬಿʼ ಗ್ರೂಪ್‌ನಿಂದ ಸೂಪರ್‌-4 ಹಂತಕ್ಕೆ ಇನ್ನೊಂದು ಸ್ಥಾನಕ್ಕಾಗಿ ಈಗ ಅತಿಥೇಯ ಲಂಕಾ ಮತ್ತು ಬಾಂಗ್ಲಾ ಸೆಣಸಾಡಬೇಕಿದೆ.

-masthmagaa.com

Contact Us for Advertisement

Leave a Reply