ಮೆಕ್ಸಿಕೊ ಏಲಿಯನ್‌ ಶವಗಳ ಬಗ್ಗೆ ನಾಸಾ ಹೇಳಿದ್ದೇನು?

masthmagaa.com:

ಇತ್ತೀಚೆಗೆ ಮೆಕ್ಸಿಕೊ ತನ್ನ ಸಂಸತ್ತಿನಲ್ಲಿ ಏಲಿಯನ್‌ಗಳದ್ದು ಎನ್ನಲಾದ ಎರಡು ಶವಗಳನ್ನ ಅನಾವರಣಗೊಳಿಸಿತ್ತು. ಇದೀಗ ಅದರ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪ್ರತಿಕ್ರಿಯೆ ನೀಡಿದೆ. ಮೆಕ್ಸಿಕೋ ಪ್ರದರ್ಶಿಸಿರುವ ನಾನ್ ಹ್ಯುಮನ್‌ ಬಾಡಿಗಳ ಕುರಿತು ನಾಸಾ ಅಧಿಕಾರಿಗಳಿಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಮಾತಾಡಿರೊ ನಾಸಾ ಸೈಂಟಿಸ್ಟ್ ಡೇವಿಡ್‌ ಸ್ಪೆರ್ಗೆಲ್‌, ನಾನು ಈ ಬಗ್ಗೆ ಕೇವಲ ಟ್ವಿಟರ್‌ನಲ್ಲಿ ನೋಡಿದ್ದೇನೆ. ನಮಗೆ ಆ ಸ್ಯಾಂಪಲ್‌ಗಳ ಸ್ವಭಾವ ಅಥ್ವಾ ನೇಚರ್‌ ಗೊತ್ತಿಲ್ಲ ಅಂತ ಹೇಳಿದ್ದಾರೆ. ಇದೇ ವೇಳೆ ಆ ಸ್ಯಾಂಪಲ್‌ಗಳನ್ನ ಸೈಂಟಿಫಿಕ್‌ ಆಗಿ ರಿಸರ್ಚ್ ಮಾಡಲು ಒದಗಿಸಿ ಅಂತ ಮೆಕ್ಸಿಕನ್‌ ಸರ್ಕಾರಕ್ಕೆ ಹೇಳಿದ್ದಾರೆ. ಅಂದ್ಹಾಗೆ ಮೆಕ್ಸಿಕನ್‌ ಸರ್ಕಾರ ರಿವೀಲ್‌ ಮಾಡಿರೊ ಏಲಿಯನ್‌ಗಳು ಎನ್ನಲಾಗ್ತಿರೊ ಈ ವಿಷಯದ ಬಗ್ಗೆ ನಾವು ಡಿಟೇಲಾಗಿ ವರದಿಯೊಂದನ್ನ ಮಾಡಿದ್ದೇವೆ. ಅದನ್ನ ನೀವು ಚೆಕ್‌ ಮಾಡಬಹುದು.

-masthmagaa.com

Contact Us for Advertisement

Leave a Reply