ನಾಯಿ ಮರಿಗೆ ʻನೂರಿʼ ಹೆಸರಿಟ್ಟ ರಾಹುಲ್‌ ಗಾಂಧಿ! ಆಕ್ಷೇಪ ವ್ಯಕ್ತಪಡಿಸಿದ ಓವೈಸಿ!

masthmagaa.com:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯವರಿಗೆ ನಾಯಿ ಮರಿಯೊಂದನ್ನ ಉಡುಗೊರೆಯಾಗಿ ನೀಡಿದ್ದು, ಅದಕ್ಕೆ ‘ನೂರಿ’ ಅಂತ ಹೆಸರಿಟ್ಟಿದ್ದಾರೆ. ಇದಕ್ಕೆ ಅಸಾದುದ್ದೀನ್ ಓವೈಸಿ ಅವರ ಪಕ್ಷ AIMIMನ ನಾಯಕ ಮೊಹಮ್ಮದ್ ಫರ್ಹಾನ್ ಅನ್ನೋರು ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಪಕ್ಷ ಇದನ್ನ ಆಕ್ಷೇಪಿಸುತ್ತೆ ಅಂತ ಹೇಳಿದ್ದಾರೆ. ಜೊತೆಗೆ ರಾಹುಲ್ ಗಾಂಧಿ ಅವರ ಕ್ರಿಯೆಗಳು ಖಂಡನಾರ್ಹವಾಗಿದೆ. ಅಲ್ದೆ ನಾಯಿಗೆ ನೂರಿ ಅಂತ ಹೆಸರಿಟ್ಟಿರೋದು ಇದೇ ಹೆಸರನ್ನು ಇಟ್ಕೊಂಡಿರೋ ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾಡಿದ ಅವಮಾನವಾಗಿದೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply