ಮಣಿಪುರದಲ್ಲಿ ಕಾಣಿಸಿಕೊಂಡ UFO: ಚೇಸ್‌ ಮಾಡಿದ ಏರ್‌ಫೋರ್ಸ್!‌

masthmagaa.com:

ನಿನ್ನೆ ಮಣಿಪುರದ ಇಂಪಾಲ್‌ ಏರ್‌ಪೋರ್ಟ್‌ ಬಳಿ ‘unidentified flying object’ (UFO) ಒಂದು ಕಾಣಿಸಿಕೊಂಡ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ಈ ಅಪರಿಚಿತ ವಸ್ತುವೊಂದು ತುಂಬಾ ಹೊತ್ತು ಆಕಾಶದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಹಾಶಿಮಾರ ಏರ್‌ಬೇಸ್‌ನಿಂದ ಎರಡು ರಫೆಲ್‌ಗಳನ್ನು ಹಾರಿಸಲಾಗಿದೆ. ಆದ್ರೆ ಜೆಟ್‌ಗಳು ಅಲ್ಲಿಗೆ ರೀಚ್‌ ಆಗಿ ನೋಡಿದಾಗ ಅಂತಹ ಅನುಮಾನಾಸ್ಪದ ವಸ್ತು ಏನೂ ಕಾಣಿಸಿಲ್ಲ ಅಂತ ಏರ್‌ಫೋರ್ಸ್‌ನ ಪೂರ್ವ ಕಮ್ಯಾಂಡ್‌ನ ಅಧಿಕಾರಿಗಳು ಹೇಳಿದ್ದಾರೆ. ಬರಿಗಣ್ಣಿಗೆ ಕಾಣಿಸುವಂತಿದ್ದ UFO ಇಂಪಾಲ್‌ ಏರ್‌ಪೋರ್ಟ್‌ನ ಮೇಲೆ ಬಹಳ ಹೊತ್ತು ಹಾರಾಟ ಮಾಡ್ತಿತ್ತು ಅಂತ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ಇದೇ ಕಾರಣಕ್ಕೆ ಅಲ್ಲಿಂದ ಹೊರಡಬೇಕಾಗಿದ್ದ ಹಲವು ಫ್ಲೈಟ್‌ಗಳು ಡಿಲೇ ಆಗಿವೆ. ಕೊಲ್ಕತ್ತಾದಿಂದ ಹೊರಟಿದ್ದ ಇಂಡಿಗೋ ವಿಮಾನವನ್ನ ಸಹ ಗುವಾಹಟಿಗೆ ಡೈವರ್ಟ್‌ ಮಾಡಲಾಗಿತ್ತು. ಅಂದ್ಹಾಗೆ UFOಗಳು ಹೆಚ್ಚಾಗಿ ಅಮೆರಿಕದಲ್ಲೇ ಕಾಣಿಸಿಕೊಳ್ತಿದ್ವು. ಅದೇನೋ ಈ ಬಾರಿ ಏಲಿಯನ್‌ಗಳಿಗೆ ಅಮೆರಿಕ ಬೋರ್‌ ಆಗಿ ಭಾರತ ನೋಡ್ಬೇಕು ಅನ್ಸಿದಿಯೋ ಏನೋ. ಅಥ್ವಾ ಈ ಕುತಂತ್ರಿ ಚೀನಾ ಅಮೆರಿಕ ಮೇಲೆ ಬಲೂನ್‌ ಬಿಟ್ಟ ಹಾಗೆ ಗೂಢಾಚಾರಿಕೆ ಉಪಕರಣ ಹಾರಿಸಿದ್ರು ಆಶ್ಚರ್ಯ ಇಲ್ಲ.

-masthmagaa.com

Contact Us for Advertisement

Leave a Reply