ಅಲಾಸ್ಕಾ ಏರ್‌ಲೈನ್ಸ್‌ ಜೊತೆ ʻಇಂಟರ್‌ಲೈನ್‌ ಪಾರ್ಟನರ್‌ಶಿಪ್‌ʼನ್ನ ಪ್ರಾರಂಭಿಸಿದ ಏರ್‌ ಇಂಡಿಯಾ!

masthmagaa.com:

ಏರ್‌ ಇಂಡಿಯಾ ಇದೀಗ ಅಮೆರಿಕದ ಅಲಾಸ್ಕಾ ಏರ್‌ಲೈನ್ಸ್‌ ಜೊತೆ ಇಂಟರ್‌ಲೈನ್‌ ಪಾರ್ಟನರ್‌ಶಿಪ್‌ನ್ನ ಪ್ರಾರಂಭಿಸಿದೆ. ಅಂದ್ಹಾಗೆ ಇಂಟರ್‌ಲೈನ್‌ ಪಾರ್ಟನರ್‌ಶಿಪ್‌ ಅಂದ್ರೆ ಒಪ್ಪಂದ ಮಾಡಿಕೊಂಡ ಎರಡು ಏರ್‌ಲೈನ್ಸ್‌ ನಡುವೆ ಟಿಕೆಟ್‌ ಮತ್ತು ಸೇವೆಗಳ ಮಾರಾಟವನ್ನ ಮಾಡಲಾಗುತ್ತೆ. ಅಲಾಸ್ಕ್‌ ಏರ್‌ಲೈನ್‌ ಟಿಕೆಟ್‌ನ್ನ ಏರ್‌ ಇಂಡಿಯಾದಿಂದಲೂ ಮಾಡಬಹುದು. ಇದ್ರಿಂದ ಭಾರತೀಯ ಪ್ರಯಾಣಿಕರು ಯುಎಸ್‌ಎ, ಮೆಕ್ಸಿಕೋ ಮತ್ತು ಕೆನಡಾದ 32 ಪ್ರಮುಖ ಸ್ಥಳಗಳಿಗೆ ಯಾವುದೇ ಅಡ್ಡಿ ಇಲ್ದೆ ಜರ್ನಿಯನ್ನ ಮಾಡಬಹುದಾಗಿದೆ. ಅಲಾಸ್ಕಾ ಏರ್‌ಲೈನ್ಸ್‌ನ ನೆಟ್‌ವರ್ಕ್‌ ಒಳಗಡೆ ಬರೋ ನ್ಯೂ ಯಾರ್ಕ್‌, ನ್ಯೂ ಜೆರ್ಸಿ, ವಾಶಿಂಗ್‌ಟನ್‌ ಡಿಸಿ, ಚಿಕಾಗೋ, ಸ್ಯಾನ್‌ ಫ್ರಾನ್ಸಿಸ್ಕೋ ಮತ್ತು ವ್ಯಾಂಕೋವರ್‌ ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಸಂಪರ್ಕ ಸಿಗುತ್ತದೆ.

-masthmagaa.com

Contact Us for Advertisement

Leave a Reply