ಗಗನಸಖಿಯರ ಯೂನಿಫಾರ್ಮ್‌ ಕೋಕ್‌ ನೀಡಲಿದ್ಯಾ ಏರ್‌ ಇಂಡಿಯಾ?

masthmagaa.com:

ಏರ್ ಇಂಡಿಯಾ ತನ್ನ ಮಹಿಳಾ ಕ್ಯಾಬಿನ್ ಸಿಬ್ಬಂದಿಯ ಸಮವಸ್ತ್ರದಲ್ಲಿ ಬದಲಾವಣೆ ತರಲು ಮುಂದಾಗಿದೆ ಅಂತ ತಿಳಿದು ಬಂದಿದೆ. ಕಳೆದ 60 ವರ್ಷಗಳಿಂದ ಫ್ಲೈಟ್ ಅಟೆಂಡೆಂಟ್‌ಗಳು ಸಾಂಪ್ರದಾಯಿಕ ಭಾರತೀಯ ಉಡುಗೆಯಾದ ಸೀರೆಗಳನ್ನು ಧರಿಸುತ್ತಿದ್ದರು. ಆದರೆ ಈಗ ಏರ್‌ ಇಂಡಿಯಾ ಗಗನಸಖಿಯರ ಸೀರೆ ಟ್ರೆಂಡ್‌ ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೊಸದಾಗಿ ತಮ್ಮ ಮಹಿಳಾ ಸಿಬ್ಬಂದಿಗೆ ಡಿಸೈನರ್‌ ಚೂಡಿದಾರ್‌ಗಳು ಹಾಗೂ ಪುರುಷ ಸಿಬ್ಬಂದಿಗೆ ಡಿಸೈನರ್‌ ಸೂಟ್‌ಗಳನ್ನು ಕಂಪನಿ ವಿನ್ಯಾಸ ಮಾಡುತ್ತಿದೆ. ಪ್ರಖ್ಯಾತ ಫ್ಯಾಶನ್‌ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಈ ಹೊಸ ಸಮವಸ್ತ್ರಗಳನ್ನು ವಿನ್ಯಾಸ ಮಾಡಲಿದ್ದಾರೆ ಅನ್ನೋ ಸುದ್ಧಿ ಹರಿದಾಡ್ತಿದೆ. ಅಂದ್ಹಾಗೆ ಜೆಆರ್‌ಡಿ ಟಾಟಾ ಅವರು 1962ರಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿಗೆ ಸೀರೆಯನ್ನು ಪರಿಚಯಿಸಿದ್ದರು. ಅಂದಿನಿಂದ ಏರ್‌ ಇಂಡಿಯಾ ಇದೇ ಟ್ರೆಂಡ್‌ ಮುಂದುವರಿಸಿಕೊಂಡು ಬಂದಿತ್ತು.

-masthmagaa.com

Contact Us for Advertisement

Leave a Reply