ಏರ್‌ ಇಂಡಿಯಾ: ನಿಗದಿತ ವಿಮಾನಗಳ ಹಾರಾಟವನ್ನ ಅ.18 ರವರೆಗೆ ರದ್ದು ಪಡಿಸಿ ವಿಸ್ತರಿಸಲಾಗಿದೆ

masthmagaa.com:

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಸಂಘರ್ಷದಿಂದ, ಏರ್‌ ಇಂಡಿಯಾ ತನ್ನ ನಿಗದಿತ ಫ್ಲೈಟ್‌ಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದ ಅವಧಿಯನ್ನ ವಿಸ್ತರಿಸಿದೆ. ಇಸ್ರೇಲ್‌ನ ಟೆಲ್‌ ಅವೀವ್‌ಗೆ ಹಾರಾಟ ಮಾಡುವ ಹಾಗೂ ಅಲ್ಲಿಂದ ಬರುವ ನಿಗದಿತ ವಿಮಾನ ಹಾರಾಟವನ್ನು ಅಕ್ಟೋಬರ್‌ 18ರವರೆಗೆ ರದ್ದುಪಡಿಸಲಾಗಿದೆ. ಈ ಹಿಂದೆ ಅಕ್ಟೋಬರ್‌ 14 ರವರೆಗೆ ಹಾರಾಟವನ್ನು ರದ್ದು ಪಡಿಸಲಾಗಿತ್ತು. ಅಂದ್ಹಾಗೆ ಸಹಜವಾಗಿ ಏರ್‌ ಇಂಡಿಯಾ ವಾರಕ್ಕೆ ಐದು ಬಾರಿ ದೆಹಲಿಯಿಂದ ಟೆಲ್‌ ಅವೀವ್‌ಗೆ ಹಾರಾಟವನ್ನ ನಡೆಸುತ್ತದೆ. ಇದೀಗ ಇಸ್ರೇಲ್‌ ಮತ್ತು ಹಮಾಸ್‌ ಯುದ್ಧದ ಸಮಯದಲ್ಲಿ, ಇಸ್ರೇಲ್‌ನಿಂದ ಭಾರತಕ್ಕೆ ವಾಪಾಸ್ಸಾಗಲು ಬಯಸುವ ಭಾರತೀಯರಿಗಾಗಿ ಲಾಂಚ್‌ ಮಾಡಲಾಗಿದ್ದ ʼಆಪರೇಷನ್‌ ಅಜಯ್‌ʼ ಮೂಲಕ ಏರ್‌ ಇಂಡಿಯಾ ಎರಡು ಬಾರಿ ಭಾರತೀಯರನ್ನು ಏರ್‌ಲಿಫ್ಟ್‌ ಮಾಡಿದೆ.

-masthmagaa.com

Contact Us for Advertisement

Leave a Reply