ವೀಲ್‌ ಚೇರ್‌ ನೀಡದ ಏರ್‌ ಇಂಡಿಯಾ ಏರ್‌ಲೈನ್ಸ್‌ಗೆ 30 ಲಕ್ಷ ದಂಡ!

masthmagaa.com:

ವೀಲ್‌ ಚೇರ್‌ ನೀಡದೇ 80 ವರ್ಷದ ವೃದ್ದರೊಬ್ಬರ ಸಾವಿಗೆ ಕಾರಣವಾಗಿದ್ದ ಆರೋಪ ಹೊತ್ತಿದ್ದ ಏರ್‌ ಇಂಡಿಯಾಗೆ ಇದೀಗ 30 ಲಕ್ಷ ದಂಡ ವಿಧಿಸಲಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ 80 ವರ್ಷದ ವೃದ್ದರೊಬ್ಬರು ವಿಮಾನದಿಂದ ಟರ್ಮಿನಲ್‌ ತಲುಪಲು ವೀಲ್‌ ಚೇರ್‌ ಕೇಳಿದ್ರು. ಆದ್ರೆ ಅವ್ರಿಗೆ ಏರ್‌ ಇಂಡಿಯಾ ವೀಲ್‌ ಚೇರ್‌ ನೀಡಿರಲಿಲ್ಲ. ಸೋ ನಡ್ಕೊಂಡೇ ಹೋದ ಅವ್ರು ದಾರಿಯಲ್ಲೇ ಮೃತಪಟ್ಟ ಘಟನೆ ಫೆಬ್ರುವರಿ 16ರಂದು ನಡೆದಿತ್ತು. ಈ ವಿಚಾರವಾಗಿ ಇದೀಗ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಏರ್‌ ಇಂಡಿಯಾಗೆ ದಂಡ ವಿಧಿಸಿದೆ.

-masthmagaa.com

Contact Us for Advertisement

Leave a Reply