ಹೀಗಿವೆ ನೋಡಿ ಏರ್‌ಇಂಡಿಯಾ ಸಿಬ್ಬಂದಿಯ ನೂತನ ನಿಯಮಗಳು!

masthmagaa.com:

ಟಾಟಾ ಗ್ರೂಪ್‌ ಒಡೆತನದ ಏರ್‌ ಇಂಡಿಯಾ ತನ್ನ ಸಿಬ್ಬಂದಿಗಳಿಗೆ ನೂತನ ನಿಯಮಗಳನ್ನ ಬಿಡುಗಡೆ ಮಾಡಿದೆ. ಪುರುಷ ಸಿಬ್ಬಂದಿ ಎಲ್ಲಾ ಕ್ಯಾಬಿನ್‌ಗಳಲ್ಲೂ ಕಪ್ಪು ಯುನಿಫಾರ್ಮ್‌ ಜಾಕೆಟ್‌ ಧರಿಸ್ಬೇಕು. ವೈಯಕ್ತಿಕ ಟೈ ಪಿನ್‌ಗಳನ್ನ ಹಾಕಿಕೊಳ್ಳೋಕೆ ಅನುಮತಿ ಇಲ್ಲ. ಹಾಗೂ ಲೋಗೊಗಳಿಲ್ಲದ ಸಾಕ್ಸ್‌ಗಳನ್ನ ಮಾತ್ರ ಹಾಕಿಕೊಳ್ಳಬೇಕು. ನೀಟ್‌ ಹೇರ್‌ ಕಟ್‌ನ್ನ ಮೆಂಟೇನ್‌ ಮಾಡ್ಬೇಕು. ಹೇರ್‌ ಜೆಲ್‌ ಬಳಕೆ ಕಡ್ಡಾಯ. ಮತ್ತು ತಲೆಯಲ್ಲಿ ಕಡಿಮೆ ಕೂದಲು ಅಥ್ವಾ ಬಾಲ್ಡ್‌ ಪ್ಯಾಚ್‌ ಇರೋರು ಫುಲ್‌ ಶೇವ್‌ ಮಾಡಿ ನೀಟಾಗಿ ಇರ್ಬೇಕು. ಮತ್ತು ಕೂದಲಿಗೆ ಗ್ರೇ ಕಲರ್‌ ಹಾಕೋ ಹಾಗಿಲ್ಲ ಅಂತ ನೂತನ ನಿಯಮಗಳಲ್ಲಿ ತಿಳಿಸಿದೆ. ವೆಡ್ಡಿಂಗ್‌ ರಿಂಗ್‌ ಹಾಕಿಕೊಳ್ಳೋಕೆ ಮಾತ್ರ ಅವಕಾಶ ನೀಡಲಾಗಿದೆ. ಮಹಿಳಾ ಸಿಬ್ಬಂದಿ ಸೀರೆ ಮತ್ತು ಇಂಡೋ-ವೆಸ್ಟರ್ನ್‌ ಜೊತೆಗೆ ಕಂಪನಿ ನೀಡಿರೋ ಯುನಿಫಾರ್ಮ್‌ ಧರಿಸಬೇಕು. ಯುನಿಫಾರ್ಮ್‌ಗೆ ಸೂಟ್‌ ಆಗೋ ತರ ಮೇಕ್‌ಅಪ್‌ ಮಾಡಿಕೊಳ್ಳೋದು ಕಡ್ಡಾಯ ಅಂತ ಗೈಡ್‌ಲೈನ್ಸ್‌ನಲ್ಲಿ ತಿಳಿಸಲಾಗಿದೆ. ಕಿವಿ ಓಲೆ ರೌಂಡ್‌ ಶೇಪ್‌ ಇರ್ಬೇಕು ಅಂತ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply