ಅಖಂಡ ಭಾರತ ಆಗುತ್ತೆ : RSS ಮುಖ್ಯಸ್ಥ

masthmagaa.com:

RSSನ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತೆ ʻಅಖಂಡ ಭಾರತ್‌ʼ ಪರವಾಗಿ ಮಾತಾಡಿದ್ದಾರೆ. ಮುಂಬರುವ ವರ್ಷಗಳಲ್ಲಿ ಅಖಂಡ ಭಾರತದ ಕನಸು ನನಸಾಗಲಿದೆ ಅಂತ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮ ಒಂದ್ರಲ್ಲಿ ಮಾತಾಡಿದ ಭಾಗವತ್‌,‌ ನೀವು ಅದಕ್ಕಾಗಿ ಅಂದ್ರೆ ಅಖಂಡ ಭಾರತಕ್ಕಾಗಿ ಕೆಲಸ ಮಾಡೋಕೆ ಶುರು ಮಾಡಿದರೆ, ನಿಮಗೆ ವಯಸ್ಸಾಗೋ ಒಳಗೆ ಅದನ್ನ ನೋಡ್ತಿರ. ಭಾರತದಿಂದ ಪ್ರತ್ಯೇಕವಾದವ್ರು ತಾವು ತಪ್ಪು ಮಾಡಿರೋದಾಗಿ ಫೀಲ್‌ ಮಾಡಿಕೊಳ್ಳುವ ಸಂದರ್ಭಗಳು ಎದುರಾಗ್ತಿವೆ. ಅವ್ರು ಮತ್ತೆ ತಾವು ಭಾರತ ಆಗಬೇಕು ಅಂತ ಅಂದುಕೊಳ್ತಾರೆ ಅಂತ ಹೇಳಿದ್ದಾರೆ. ಜೊತೆಗೆ ಭಾರತ ಆಗಬೇಕಂದ್ರೆ ಮ್ಯಾಪ್‌ನಲ್ಲಿ ಲೈನ್‌ಗಳನ್ನ ಅಳಿಸೊ ಬಗ್ಗೆ ಅವರು ಯೋಚಿಸ್ತಾರೆ. ಆದ್ರೆ ಅದು ಆ ರೀತಿ ಅಲ್ಲ. ಭಾರತ ಅಂದ್ರೆ ಅದರ ಸ್ವಭಾವವನ್ನ, ದೇಶದ ಗುಣವನ್ನ ಸ್ವೀಕರಿಸಬೇಕು ಅಂತ ಭಾಗವತ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply