ಇಸ್ರೇಲ್‌ ಮೇಲೆ ಇರಾನ್‌ ದಾಳಿ ವಿಚಾರ: ಇರಾನ್‌ಗೆ ಧನ್ಯವಾದ ಅಂದ ಖಮೇನಿ!

masthmagaa.com:

ಇಸ್ರೇಲ್‌ ಮೇಲೆ ಇರಾನ್‌ ನಡೆಸಿದ ದಾಳಿ ಬಗ್ಗೆ ಇರಾನ್‌ನ ಸುಪ್ರೀಂ ಲೀಡರ್‌ ಅಯತೊಲ್ಲಾಹ್ ಅಲಿ ಖಮೇನಿ ಪ್ರತಿಕ್ರಿಯೆ ನೀಡಿದ್ದಾರೆ. ಇಸ್ರೇಲ್‌ ಮೇಲೆ ಸರಣಿ ಮಿಸೈಲ್‌ ಹಾಗೂ ಡ್ರೋನ್‌ಗಳ ದಾಳಿಯನ್ನ ನಡೆಸಿ ಇರಾನ್‌ ತನ್ನ ಶಕ್ತಿಯನ್ನ ಪ್ರದರ್ಶಿಸಿದೆ. ಹೀಗಾಗಿ ತಾನು ಇರಾನ್‌ಗೆ ಧನ್ಯವಾದ ಅರ್ಪಿಸೊದಾಗಿ ಖಮೇನಿ ಹೇಳಿದ್ದಾರೆ. ಅಲ್ದೇ ಇಸ್ರೇಲ್‌ ವಿರುದ್ದದ ದಾಳಿಯಲ್ಲಿ ಎಷ್ಟು ಮಿಸೈಲ್‌, ಡ್ರೋನ್‌ಗಳನ್ನ ಹಾರಿಸಿದ್ದಾರೆ. ಎಷ್ಟು ಡ್ರೋನ್‌ಗಳು ಗುರಿ ತಲುಪಿವೆ ಅನ್ನೊದು ಮುಖ್ಯವಲ್ಲ.ಆದ್ರೆ ಇರಾನ್‌ ತನ್ನ ಶಕ್ತಿ ಪ್ರದರ್ಶನ ಮಾಡಿದ್ದು ಮುಖ್ಯ ಅಂತ ಖಮೇನಿ ತಿಳಿಸಿದ್ದಾರೆ. ಇನ್ನೊಂದೆಡೆ ಏಪ್ರಿಲ್‌ 18ರಂದು ಇರಾನ್‌ನ ನ್ಯೂಕ್ಲಿಯರ್‌ ಸೈಟ್‌ ಹತ್ರ ನಡೆದ ಸ್ಫೋಟದಲ್ಲಿ ಇಸ್ರೇಲ್‌ ಭಾಗಿಯಾಗಿದೆ ಅಂತ ಇಸ್ರೇಲ್‌ನ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ ಮೇಲೆ ಇಸ್ರೇಲ್‌ ತನ್ನ ಸ್ವದೇಶಿ ನಿರ್ಮಿತ ʻರಾಂಪೇಜ್‌ ಮಿಸೈಲ್‌ʼ ಮೂಲಕ ದಾಳಿ ಮಾಡಿದೆ ಅಂತ ಇಸ್ರೇಲ್‌ ಮಾಧ್ಯಮಗಳು ವರದಿ ಮಾಡಿವೆ. ದ್ರೆ ಈ ಬಗ್ಗೆ ಇಸ್ರೇಲ್‌ ಸರ್ಕಾರ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆಗಳನ್ನ ನೀಡಿಲ್ಲ.

-masthmagaa.com

Contact Us for Advertisement

Leave a Reply