ಮೆಕ್ಸಿಕೋ ಸಂಸತ್‌ನಲ್ಲಿ ಏಲಿಯನ್‌ ಶವ ಪ್ರದರ್ಶನ?

masthmagaa.com:

ಅನ್ಯಗ್ರಹ ಜೀವಿಗಳು ಅಥವಾ ಏಲಿಯನ್‌ಗಳ ಇರುವಿಕೆ ಬಗೆಗಿನ ಚರ್ಚೆಗಳು ಮುಂದುವರೆದಿವೆ. ಇದೀಗ ಮೆಕ್ಸಿಕೋದ ಸಂಸತ್‌ನಲ್ಲಿ ಅನ್ಯಗ್ರಹ ಜೀವಿಗಳದ್ದು ಎನ್ನಲಾದ ಎರಡು ಶವಗಳನ್ನ ಅನಾವರಣಗೊಳಿಸಿದ್ದು, ಈ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಮೆಕ್ಸಿಕೋದ ಕಾಂಗ್ರೆಸ್‌ನಲ್ಲಿ ಏಲಿಯನ್‌ಗಳದ್ದು ಎನ್ನಲಾದ ಎರಡು ಶವಗಳನ್ನ ಪ್ರದರ್ಶನ ಮಾಡಲಾಗಿದೆ. ಈ ಎರಡೂ ಶವಗಳನ್ನು ಪೆರುವಿನ ಕುಸ್ಕೋ ನಗರದಲ್ಲಿ ವಶಕ್ಕೆ ಪಡೆಯಲಾಗಿದೆ ಅಂತ ಹೇಳಲಾಗಿದೆ. ಇದೀಗ ಮೆಕ್ಸಿಕೋ ನಗರದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

-masthmagaa.com

Contact Us for Advertisement

Leave a Reply