ಇಸ್ರೇಲ್‌ಗೆ ಅಮೆರಿಕ ಮತ್ತಷ್ಟು ಶಸ್ತ್ರಾಸ್ತ್ರ ಪೂರೈಕೆ! ಭಾರಿ ವ್ಯಾಪಾರ

masthmagaa.com:

ಹಮಾಸ್‌ ವಿರುದ್ಧ ಇಸ್ರೇಲ್‌ ಕೈಗೆ ಇನ್ನಷ್ಟು ಶಕ್ತಿ ಕೊಡೋಕೆ ಅಮೆರಿಕನ್‌ ಕಾಂಗ್ರೆಸ್‌ನಲ್ಲಿ ಪ್ರಪೋಸಲ್‌ ನೀಡಲಾಗಿದೆ ಅಂತ ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಹೇಳಿದ್ದಾರೆ. ಬರೋಬ್ಬರಿ 147.5 ಮಿಲಿಯನ್‌ ಡಾಲರ್‌, ಅಂದ್ರೆ ಸುಮಾರು 1,200 ಕೋಟಿ ರೂಪಾಯಿಗಳ ಆಯುಧಗಳನ್ನ ಇಸ್ರೇಲ್‌ಗೆ ಸೇಲ್‌ ಮಾಡೋಕೆ ಅಮೆರಿಕ ಮುಂದಾಗಿದೆ ಎನ್ನಲಾಗ್ತಿದೆ. ಇನ್ನು ಯುದ್ಧದಲ್ಲಿ ಈಗಾಗ್ಲೆ ಉತ್ತರ ಗಾಜಾವನ್ನ ನೆಲಸಮ ಮಾಡಿರೋ ಇಸ್ರೇಲ್‌ ಇದೀಗ ದಕ್ಷಿಣದ ನಗರಗಳ ಮೇಲೆ ದಾಳಿ ತೀವ್ರಗೊಳಿಸಿದೆ. ದಾಳಿ ಜಾಸ್ತಿಯಾಗ್ತಿದ್ದಂತೆ ಗಾಜಾದ ದಕ್ಷಿಣ ತುತ್ತ ತುದಿಯಲ್ಲಿರೋ ರಫಾಹ್‌ ನಗರಕ್ಕೆ ಅಲ್ಲಿನ ಜನ ಹೋಗುತ್ತಿದ್ದಾರೆ. ಇತ್ತ ದಕ್ಷಿಣ ಆಫ್ರಿಕ, ಇಸ್ರೇಲ್‌ 1948ರ ಜೀನೊಸೈಡ್‌ ಕನ್ವೆಂಶನ್‌ ಅಥ್ವಾ ನರಮೇಧ ಸಮಾವೇಶದ ನಿಯಮಗಳನ್ನ ಮುರಿದಿದೆ. ಆದ್ರಿಂದ ICJ ಅಂದ್ರೆ ಅಂತರಾಷ್ಟ್ರೀಯ ನ್ಯಾಯಾಲಯ ಇಸ್ರೇಲ್‌ ಮೇಲೆ ಕ್ರಮ ತಗೊಳ್ಬೇಕು ಅಂತೇಳಿದೆ. ಇನ್ನು ಶುಕ್ರವಾರದ ದಾಳಿಯಲ್ಲಿ ಉತ್ತರ ಗಾಜಾದಲ್ಲಿರೋ ಹಮಾಸ್‌ ಜೆನರಲ್‌ನ ಪ್ರಧಾನ ಕಚೇರಿ.. ಅಂದ್ರೆ ಇದೊಂದು ಟನೆಲ್‌.. ಈ ಟನೆಲನ್ನ ಈಗ ನಾಶಪಡಿಸಲಾಗಿದೆ ಅಂತ ಇಸ್ರೇಲ್‌ ಹೇಳಿದೆ.

-masthmagaa.com

Contact Us for Advertisement

Leave a Reply