ಇಲ್ಲಿ ಇಳೀಲಾ? ಅಲ್ಲಿ ಇಳೀಲಾ? ಜಾಗ ಹುಡುಕ್ತಿದೆ ವಿಕ್ರಮ್‌ ಲ್ಯಾಂಡರ್‌!

masthmagaa.com:

ದೇಶದ ಮಹತ್ವಾಕಾಂಕ್ಷಿ ಚಂದ್ರಯಾನ-3ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಲ್ಯಾಂಡ್‌ ಆಗಲು ಕೇವಲ ಎರಡು ದಿನ ಮಾತ್ರ ಬಾಕಿಯಿದೆ. ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡ್‌ ಆಗಲು ಸೂಕ್ತ ಸ್ಥಳ ಹುಡುಕುತ್ತಿರೋ ಲ್ಯಾಂಡರ್‌ ವಿಕ್ರಮ್‌, ಚಂದ್ರನ ಕೆಲವು ಫೋಟೊಗಳನ್ನ ರವಾನಿಸಿದೆ. ಚಂದ್ರನ ಸನಿಹಕ್ಕೆ ತಲುಪಿರುವ ಚಂದ್ರಯಾನ-3ರ ಲ್ಯಾಂಡರ್‌ಗೆ ಅಳವಡಿಸಿರುವ Lander Hazard Detection and Avoidance Camera (LHDAC) ಕ್ಯಾಮೆರಾ ಸೆರೆ ಹಿಡಿದ ಫೋಟೊಗಳನ್ನ ಇಸ್ರೋ ಶೇರ್‌ ಮಾಡಿದೆ. ಲ್ಯಾಂಡ‌ರ್‌ ಇಳಿಯಲು ಆಗಸ್ಟ್‌ 23ರ ಸಂಜೆ 6:04 ಕ್ಕೆ ಸಮಯ ನಿಗದಿಪಡಿಸಲಾಗಿದೆ. ಅದಕ್ಕಾಗಿ ಸುರಕ್ಷಿತ ಲ್ಯಾಂಡಿಂಗ್‌ಗೆ ಸೂಕ್ತ ಜಾಗವನ್ನು ಹುಡುಕುವ ನಿಟ್ಟಿನಲ್ಲಿ ಲ್ಯಾಂಡರ್ ಹಲವು ಚಿತ್ರಗಳನ್ನು ರವಾನಿಸಿದೆ. ಈ ಫೋಟೊಗಳಲ್ಲಿ ಚಂದ್ರನ ಮೇಲಿರುವ ಕುಳಿಗಳು ಕಾಣುತ್ತಿದ್ದು, ಹೆಚ್ಚಿನ ದಿಣ್ಣೆಗಳು, ತಗ್ಗು ಹಾಗೂ ಕುಳಿಗಳಿರದ ಜಾಗದಲ್ಲಿ ವಿಕ್ರಮ್‌ ಲ್ಯಾಂಡ್‌ ಆಗೋಕೆ ಸ್ಥಳ ನಿಗದಿಪಡಿಸೋಕೆ ಈ ಫೋಟೊಗಳು ಸಹಾಕವಾಗಲಿವೆ ಅಂತ ಇಸ್ರೋ ಹೇಳಿದೆ.

-masthmagaa.com

Contact Us for Advertisement

Leave a Reply