ಕಮಲ-ದಳ ಮೈತ್ರಿಗೆ ಬೂಸ್ಟ್‌ ನೀಡಿದ ಶಾ; ಈಶ್ವರಪ್ಪಗೆ ದಿಲ್ಲಿ ಬುಲಾವ್!

masthmagaa.com:

ಲೋಕಸಭಾ ಚುನಾವಣೆ ಹೊತ್ತಲ್ಲೆ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ಪ್ರಭಾವಿ ನಾಯಕ ಅಮಿತ್‌ ಶಾ ಆಗಮಿಸಿದ್ದಾರೆ. ರಾಜ್ಯದ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲಲು ಹೊಸ ತಂತ್ರಗಾರಿಕೆ ಹೆಣೆಯೊ ಸಂಬಂಧ ಕಮಲ-ದಳ ನಾಯಕರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ರು. ಬಳಿಕ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಕಾಂಗ್ರೆಸ್‌ ವಿರುದ್ದ ವಾಗ್ದಾಳಿ ನಡೆಸಿದ್ರು. ʻತಮ್ಮ ವೋಟ್‌ ಬ್ಯಾಂಕ್‌ ಕೈ ತಪ್ಪೊ ಭೀತಿಯಿಂದ ಆಹ್ವಾನ ಇದ್ರೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕಾಂಗ್ರೆಸ್ಸಿಗರು ಬರಲಿಲ್ಲʼ ಅಂತ ಟೀಕಿಸಿದ್ದಾರೆ. ಹಾಗೆ ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದ ಚನ್ನಪಟ್ಟಣದಿಂದಲೇ ರಾಜ್ಯದ ಮೊದಲ ಬಿಜೆಪಿ ರೋಡ್‌ ಶೋ ಆರಂಭಿಸಿದ್ದಾರೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿರೊ KS ಈಶ್ವರಪ್ಪ ಅವ್ರಿಗೆ ಅಮಿತ್‌ ಶಾ ಬುಧವಾರ ದಿಲ್ಲಿಗೆ ಬರುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯ ನೀಡಿರೊ ಈಶ್ವರಪ್ಪ, ʻನನಗೆ ಅಮಿತ್‌ ಶಾ ಅವ್ರು ಕರೆ ಮಾಡಿದ್ದಾರೆ. ಸೋ ನಾನು ಎಲೆಕ್ಷನ್‌ಗೆ ಪಕ್ಷೇತರ ಅಭ್ಯರ್ಥಿಯಾಗಿ ಕಂಟೆಸ್ಟ್‌ ಮಾಡೋದಾಗಿ ದಿಲ್ಲಿಗೆ ಹೋಗಿ ನನ್ನ ನಿಲುವು ತಿಳಿಸಿ ಬರ್ತೇನೆ. ಆದ್ರೆ ಒಂದು ವೇಳೆ ನಾಳೆ ಬೆಳಗ್ಗೆನೇ ಬಿಜೆಪಿ ರಾಜ್ಯಾಧ್ಯಕ್ಷರನ್ನ ಬದಲಾವಣೆ ಮಾಡಿದ್ರೆ ನಾನು ಚುನಾವಣೆಯಲ್ಲಿ ಸ್ಫರ್ಧಿಸಲ್ಲʼ ಅಂತ ಸ್ಪಷ್ಟ ಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply