75 ನೇ ವಸಂತಕ್ಕೆ ಕಾಲಿಟ್ಟ ಅನಂತ್‌ ನಾಗ್‌ !

masthmagaa.com:

ಇವತ್ತು ಅನಂತ್‌ನಾಗ್‌ ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೋಳ್ತಾ ಇದ್ದಾರೆ. 75 ವರ್ಷ ಆದ್ರೂ ಕೂಡ ಸಿನಿಮಾ ರಂಗದಲ್ಲಿ ಆಕ್ಟೀವ್‌ ಇದ್ದಾರೆ. ಅನಂತ್‌ ನಾಗ್‌ ಅವರ ಬಗ್ಗೆ ಒಂದಿಷ್ಟು ಮಾಹಿತಿಯನ್ನ ನೋಡ್ತಾ ಹೋಗೋಣ..

ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಅನಂತ್‌ ನಾಗ್‌ ಕೂಡ ಒಬ್ಬರು. ಹೆಚ್ಚಿನ ಓದಿಗೋಸ್ಕರ ಮುಂಬೈನಲ್ಲೇ ಉಳಿದಿದ್ದ ಅನಂತ್‌ ನಾಗ್‌ ಅವರು ಕನ್ನಡ, ಕೊಂಕಣಿ ಮತ್ತು ಮರಾಠಿ ರಂಗಭೂಮಿಗಳಲ್ಲಿ 8 ವರ್ಷಗಳ ಕಾಲ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಅನಂತ್‌ನಾಗ್‌ ಅವರು ಪಂಚಭಾಷಾ ನಟ ಕೂಡ ಹೌದು. ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಶ್ಯಾಂ ಬೆನೆಗಲ್ ನಿರ್ದೇಶನದ ಹಿಂದಿ ಭಾಷೆಯ ‘ಅಂಕುರ್’ ಅನಂತ್ ನಾಗ್‌ ಅವರ ಮೊದಲ ಚಿತ್ರ. ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ, ಕೊಂಡುರಾ ಮತ್ತು ರಾತ್ ಸೇರಿದಂತೆ ಹಲವಾರು ಹಿಂದಿ ಮೂವಿಗಳಲ್ಲಿ ಅನಂತ್‌ನಾಗ್‌ ಅವರು ನಟಿಸಿದ್ದಾರೆ.

1973ರಲ್ಲಿ ರಿಲೀಸ್‌ ಆದ ಸಂಕಲ್ಪ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಅನಂತ್‌ನಾಗ್‌ ಪಾದಾರ್ಪಣೆ ಮಾಡಿದ್ರು. ಸಂಕಲ್ಪ ಮೂವಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಠಿ ಮಾಡಿತ್ತು. ಅನಂತ್‌ ನಾಗ್‌ ಮತ್ತು ಲಕ್ಷ್ಮೀ ಜೋಡಿ ಆಗಿನ ಕಾಲದಲ್ಲಿ ತುಂಬಾನೇ ಫೇಮಸ್‌ ಆಗಿದ್ರು. ಅನಂತ್ ನಾಗ್ ಅವರು ಇತರ ದಿಗ್ಗಜ ನಟರ ಜೊತೆಗೂ ಕೂಡ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ. ರಾಜ್ ಕುಮಾರ್ ಜೊತೆಗೆ ‘ಕಾಮನಬಿಲ್ಲು’,ವಿಷ್ಣುವರ್ಧನ್ ಜೊತೆಗೆ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ರವಿಚಂದ್ರನ್ ಅವರ ಜೊತೆಗೆ ‘ರಣಧೀರ’, ಶಾಂತಿಕ್ರಾಂತಿ’ ಇದೆಲ್ಲ ಪ್ರಮುಖ ಸಿನಿಮಾಗಳು.

ಇನ್ನು ಅನಂತ್‌ ನಾಗ್‌ ಅವರು ಸಿನಿಮಾ ರಂಗಕ್ಕೆ ಬಂದು 50 ವರ್ಷಗಳು ಕಳೆದಿದೆ. ಸ್ಯಾಂಡಲ್‌ವುಡ್ನಲ್ಲಿ ಸಹಜ ನಟ ಅಂತಾನೇ ಕರೆಸಿಕೊಳ್ಳುವ ಅನಂತ್‌ನಾಗ್‌ ಅವರು ತಮ್ಮ ಕಣ್ಣಿನ ಮೂಲಕವೇ ಭಾವನೆಗಳನ್ನ ಎದುರಿನವರಿಗೆ ತಿಳಿಸುವಂತ ಅತ್ಯದ್ಭುತ ನಟ. ಅನಂತ್‌ನಾಗ್‌ ಅವರಿಗೆ 6 ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, 7 ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿಗಳು ದೊರೆತಿದೆ.

-masthmagaa.com

Contact Us for Advertisement

Leave a Reply