ಏಷ್ಯಾಕಪ್‌: ಪಾಕ್‌ ಅಭಿಮಾನಿಗಳನ್ನ ಅಟ್ಟಾಡಿಸಿ ಹೊಡೆದ ಅಫ್ಘನ್ನರು!

masthmagaa.com:

ನಿನ್ನೆ ನಡೆದ ಏಷ್ಯಾ ಕಪ್‌ ಸೂಪರ್‌ 4 ಕದನದಲ್ಲಿ ಎದುರಾಳಿ ಪಾಕ್‌ ವಿರುದ್ದ ಅಫ್ಘಾನಿಸ್ತಾನ ವಿರೋಚಿತ ಸೋಲು ಕಂಡಿದೆ. ಕೊನೇ ಓವರ್‌ವರೆಗೂ ಆಫ್ಘಾನ್‌ ತಂಡದಿಂದ ಭಾರಿ ಪೈಪೋಟಿ ಎದುರಿಸಿದ್ದ ಪಾಕ್‌ ಕೇವಲ ಒಂದು ವಿಕೆಟ್‌ನಿಂದ ಗೆಲುವು ದಾಖಲಿಸಿ ಫೈನಲ್‌ ಪ್ರವೇಶಿಸಿದೆ. ಇತ್ತ ಪಂದ್ಯದ ವೇಳೆ ಬಿಗುವಿನ ವಾತವರಣ ಕೂಡ ಉಂಟಾಗಿತ್ತು. ಅಫ್ಘಾನ್‌ ಬೋಲರ್‌ ಫರೀಧ್‌ ಮೇಲೆ ಪಾಕ್‌ ಕ್ರಿಕೆಟಿಗ ಆಸೀಫ್‌ ಆಲಿ ಬ್ಯಾಟ್‌ ಮೂಲಕ ಹಲ್ಲೆಗೆ ಮುಂದಾಗಿದ್ರು. ಸಹ ಆಟಗಾರರು ಅವರನ್ನ ಸಮಾಧಾನ ಮಾಡಿದ್ದಾರೆ. ಮೈದಾನದಲ್ಲಿ ಆಟಗಾರರೇ ಜಗಳ ಆಡ್ತಿದ್ರೆ, ಇತ್ತ ಎರಡೂ ತಂಡದ ಅಭಿಮಾನಿಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಪಾಕ್‌ ಅಭಿಮಾನಿಗಳ ಮೇಲೆ ಆಫ್ಘಾನಿಗರು ಕುರ್ಚಿ ಸೇರಿದಂತೆ ಸಿಕ್ಕದನ್ನ ತಗೊಂಡು ಮನಬಂದಂತೆ ಥಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗ್ತಿದೆ.

-masthmagaa.com

Contact Us for Advertisement

Leave a Reply