ಗಾಜಾದಲ್ಲಿ ಕದನ ವಿರಾಮ ವಿಚಾರ: ಇಸ್ರೇಲ್‌ನತ್ತ ಆಂಟೋನಿ ಬ್ಲಿಂಕನ್!

masthmagaa.com:

ಗಾಜಾದಲ್ಲಿ ಕದನ ವಿರಾಮ ಘೋಷಣೆಯಾಗ್ಬೇಕು ಅಂತ ಅಮೆರಿಕ ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ಗೆ ಒತ್ತಾಯಿಸ್ತಾನೆ ಬಂದಿತ್ತು. ಈಗ ಇದರ ಬಗ್ಗೆ ಅಂತಿಮ ಸುತ್ತಿನ ಮಾತುಕತೆ ಮಾಡೋಕೆ ಸ್ವತಃ ಅಮೆರಿಕದ ಸೆಕ್ರೆಟ್ರಿ ಆಫ್‌ ಸ್ಟೇಟ್‌ ಆಂಟೋನಿ ಬ್ಲಿಂಕನ್‌ ಇಸ್ರೇಲ್‌ಗೆ ತೆರಳಿದ್ದಾರೆ. ಸೌದಿ ಅರೇಬಿಯಾ, ಈಜಿಪ್ಟ್‌ ಜೊತೆ ಕದನ ವಿರಾಮದ ಬಗ್ಗೆ ಡಿಸ್ಕಸ್‌ ಮಾಡಿದ ನಂತ್ರ ಬ್ಲಿಂಕನ್‌ ಶುಕ್ರವಾರ ಇಸ್ರೇಲ್‌ಗೆ ಹಾರಿದ್ದಾರೆ. ಅಂದ್ಹಾಗೆ ಗಾಜಾ ಕದನ ವಿರಾಮ ವಿಚಾರವಾಗಿ ವಿಶ್ವ ಸಂಸ್ಥೆಯಲ್ಲಿ ವೋಟಿಂಗ್‌ ಪ್ರಕ್ರಿಯೆ ಅಂತಿಮ ಘಟ್ಟ ತಲುಪುತ್ತಿದೆ. ಕದನ ವಿರಾಮ ನಿಲ್ಲಬೇಕು ಅಂತ ವೊಟ್‌ ಹಾಕೋಕೆ ವಿಶ್ವದ ಅನೇಕ ದೇಶಗಳು ಸಜ್ಜಾಗಿವೆ. ಇದರ ನಡುವೆಯೇ ಅಮೆರಿಕದ ನಾಯಕ ಇಂಪಾರ್ಟೆಂಟ್‌ ಭೇಟಿಗೆ ತೆರಳಿದ್ದಾರೆ. ಇನ್ನು ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಕದನ ವಿರಾಮ ಪ್ರಸ್ತಾಪವನ್ನ ಅಮೆರಿಕನೇ ವಿಟೋ ಅಧಿಕಾರ ಬಳಸಿ ತಡೆ ಹಿಡಿದಿತ್ತು. ಆದ್ರೆ ಈಗ ಅಮೆರಿಕನೇ ಕದನ ವಿರಾಮ ಪ್ರಸ್ತಾಪಕ್ಕೆ ಮುಂದಾಗಿರೊ ತರ ಕಾಣಿಸ್ತಿದೆ.

-masthmagaa.com

Contact Us for Advertisement

Leave a Reply