ಕ್ರಿಕೆಟ್‌ ಜಗತ್ತಿನ ರನ್‌ ಮಷೀನ್‌ ವಿರಾಟ್ ಕೊಹ್ಲಿಗೆ ಗಂಡು ಮಗು!

masthmagaa.com:

ʻನಮಗೆ ಗಂಡು ಮಗು ಜನಿಸಿದ್ದು, ಅದನ್ನ ಗೌಪ್ಯವಾಗಿ ಇಟ್ಟಿದ್ದ ವಿಚಾರವಾನ್ನ ಗೌರವಿಸಿʼ ಅಂತ ವಿರಾಟ್‌ ಕೊಹ್ಲಿ ತಮ್ಮ ಹಿತೈಷಿಗಳಿಗೆ ಮನವಿ ಮಾಡಿದ್ದಾರೆ. ವಿಶ್ವ ಕ್ರಿಕೆಟ್‌ ರನ್‌ ಮಷೀನ್‌ ಹಾಗೂ ಬಾಲಿವುಡ್‌ ಸ್ಟಾರ್‌ ನಟಿ ಅನುಷ್ಕಾ ಶರ್ಮಾ ದಂಪತಿಗೆ ಫೆಬ್ರುವರಿ 15 ರಂದು ಗಂಡು ಮಗು ಜನಿಸಿದೆ. ಹಾಗೂ ಈ ಮಗುವಿಗೆ “ಅಕಾಯ್‌” ಅಂತ ಹೆಸರಿಡಲಾಗಿದೆ ಅನ್ನೊ ಬಗ್ಗೆ ಸ್ವತಃ ವಿರಾಟ್‌ ಕೊಹ್ಲಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಜೊತೆಗೆ ʻಫೆಬ್ರುವರಿ 15 ರಂದು ನಮ್ಮ ಮಗು ಅಕಾಯ್‌ಯನ್ನ ನಾವು ಈ ಜಗತ್ತಿಗೆ ಸ್ವಾಗತಿಸಿದ್ದೇವೆ. ಈ ವಿಚಾರವನ್ನ ಗೌಪ್ಯವಾಗಿ ಇಟ್ಟಿದ್ದನ್ನ ನೀವೆಲ್ಲ ಗೌರವಿಸಿʼ ಅಂತ ಕೊಹ್ಲಿ ತಮ್ಮ ಹಿತೈಷಿಗಳಿಗೆ ಮನವಿ ಕೂಡ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply