ಪ್ರಾಣ ಪಣಕಿಟ್ಟು ಯೋಧನನ್ನ ರಕ್ಷಿಸಿದ ಕೆಂಟ್‌ ಶ್ವಾನ!

masthmagaa.com:

ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಯೋಧನನ್ನು ರಕ್ಷಣೆ ಮಾಡಿದ 6 ವರ್ಷದ ಸೇನಾ ಶ್ವಾನ ಕೆಂಟ್, ಉಗ್ರರ ಗುಂಡೇಟಿಗೆ ಇಂದು ಬಲಿಯಾಗಿದೆ. ಕೆಂಟ್​ ಒಂದು ಲ್ಯಾಬ್ರಡಾರ್ ತಳಿಯ ಹೆಣ್ಣು ನಾಯಿಯಾಗಿದ್ದು, 21ನೇ ಸೇನಾ ಶ್ವಾನ ಘಟಕದಲ್ಲಿ ಸೇವೆ ಸಲ್ಲಿಸುತ್ತಿತ್ತು. ‘ಆಪರೇಷನ್ ಸುಜಲಿಗಾಲ’ದಲ್ಲಿಯೂ ಮುಂಚೂಣಿಯಲ್ಲಿತ್ತು. ಕಾರ್ಯಾಚರಣೆ ವೇಳೆ ಭಯೋತ್ಪಾದಕರ ಜಾಡು ಹಿಡಿದು ಸೈನಿಕರ ತುಕಡಿಯನ್ನ ಕೆಂಟ್​ ಮುನ್ನಡೆಸುತ್ತಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ತನ್ನ ನಿರ್ವಾಹಕನ ಪ್ರಾಣವನ್ನು ಉಳಿಸಿ, ಕೆಂಟ್​ ತನ್ನ ಉಸಿರು ಚೆಲ್ಲಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply