10ಕ್ಕೂ ಅಧಿಕ ವರ್ಷಗಳ ಬಳಿಕ ಅರಬ್‌ ಲೀಗ್‌ಗೆ ಸೇರಿಕೊಂಡ ಸಿರಿಯಾ!

masthmagaa.com:

10ಕ್ಕೂ ಅಧಿಕ ವರ್ಷಗಳ ಬಳಿಕ ಇದೀಗ ಮತ್ತೆ ಸಿರಿಯಾ ಅರಬ್‌ ಲೀಗ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಈಜಿಪ್ಟ್‌ನಲ್ಲಿ ನಡೆದ ಕ್ಲೋಸ್ಡ್‌ ಡೋರ್‌ ಮೀಟಿಂಗ್‌ನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅರಬ್‌ ಲೀಗ್‌ನ 22 ಸದಸ್ಯ ರಾಷ್ಟ್ರಗಳಲ್ಲಿ 13 ದೇಶಗಳ ವಿದೇಶಾಂಗ ಸಚಿವರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇವರು ವೋಟ್‌ ಮಾಡುವ ಮೂಲಕ ಅರಬ್‌ ಲೀಗ್‌ನ ಸಂಸ್ಥಾಪಕ ದೇಶವಾದ ಸಿರಿಯಾಕ್ಕೆ ಲೀಗ್‌ನಲ್ಲಿ ಮತ್ತೆ ಸ್ಥಾನ ನೀಡಿದ್ದಾರೆ ಅಂತ ತಿಳಿದು ಬಂದಿದೆ. ಅಂದ್ಹಾಗೆ 2011ರಲ್ಲಿ ಸಿರಿಯಾದಲ್ಲಿ ನಾಗರಿಕ ಸಂಘರ್ಷ ಉಂಟಾಗಿತ್ತು. ಆ ವೇಳೆ ಪ್ರಜಾಪ್ರಭುತ್ವದ ಪರ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಸಿರಿಯಾದ ಅಧ್ಯಕ್ಷ ಬಶರ ಅಲ್‌-ಅಸ್ಸಾದ್‌ ಹಿಂಸಾಚಾರ ಮಾರ್ಗವನ್ನ ಅನುಸರಿಸಿದ್ರು. ಸಂಘರ್ಷದಲ್ಲಿ ಸುಮಾರು 5 ಲಕ್ಷ ಜನ ಸಾವನ್ನಪ್ಪಿದ್ರು. ಅಲ್ದೇ 2.3 ಕೋಟಿ ಜನರನ್ನ ಸ್ಥಳಾಂತರ ಮಾಡಲಾಗಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ಸಿರಿಯಾವನ್ನ ಅರಬ್‌ ಲೀಗ್‌ನಿಂದ ಹೊರ ಹಾಕಲಾಗಿತ್ತು. ಇದೀಗ ಮತ್ತೆ ಸಿರಿಯಾವನ್ನ ಅರಬ್‌ ಲೀಗ್‌ಗೆ ಸ್ವಾಗತಿಸಿದ್ದು, ಮೇ 19 ರಂದು ಸೌದಿ ಅರೆಬಿಯಾದಲ್ಲಿ ನಡೆಯಲಿರುವ ಅರಬ್‌ ಲೀಗ್‌ ಶೃಂಗಸಭೆಗೆ ಆಹ್ವಾನಿಸಲಾಗಿದೆ. ಇನ್ನು ಸಿರಿಯಾವನ್ನ ಮತ್ತೆ ಸೇರಿಸಿಕೊಂಡಿದ್ದು ಅಲ್ಲಿನ ಸಮಸ್ಯೆಗಳು ಬಗೆಹರಿದಿವೆ ಅಂತಲ್ಲ. ಬದಲಾಗಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸಿರಿಯಾ ಸರ್ಕಾರದ ಜೊತೆ ಚರ್ಚಿಸಿ ಸಾಲ್ವ್‌ ಮಾಡೋಕೆ ಅಂತ ಅರಬ್‌ ಲೀಗ್‌ನ ಮುಖ್ಯಸ್ಥ ಅಹ್ಮದ್‌ ಅಬೊಲ್‌ ಘಿತ್‌ ಹೇಳಿದ್ದಾರೆ. ಇತ್ತ ಅರಬ್‌ ಲೀಗ್‌ ಈ ಕ್ರಮವನ್ನ ಅಮೆರಿಕ ಟೀಕಿಸಿದೆ. ಸಿರಿಯಾ ಅರಬ್‌ ಲೀಗ್‌ ಮರುಸೇರ್ಪಡೆಯನ್ನ ಡಿಸರ್ವ್‌ ಮಾಡಲ್ಲ. ಆದ್ರೆ ಸಿರಿಯಾದಲ್ಲಿನ ಬಿಕ್ಕಟ್ಟನ್ನ ಬಗೆಹರಿಸಲು ಅರಬ್‌ ಲೀಗ್‌ನ ಈ ನಿರ್ಧಾರವನ್ನ ಬೆಂಬಲಿಸುತ್ತೆ ಅಂತ ಅಮೆರಿಕ ಹೇಳಿದೆ. ಅಂದ್ಹಾಗೆ ಅರಬ್‌ ಲೀಗ್‌ ಅಥ್ವಾ ಲೀಗ್‌ ಆಫ್ ಅರಬ್‌ ಸ್ಟೇಟ್ಸ್‌ ಒಕ್ಕೂಟವನ್ನ 1945ರಲ್ಲಿ 6 ಸಂಸ್ಥಾಪಕ ದೇಶಗಳಾದ ಈಜಿಪ್ಟ್‌, ಇರಾಕ್‌, ಜೋರ್ಡಾನ್‌, ಲೆಬಾನನ್‌, ಸೌದಿ ಅರೆಬಿಯಾ ಹಾಗೂ ಸಿರಿಯಾ ಸೇರಿ ರಚಿಸಿದ್ದವು. ಪ್ರಸ್ತುತ ಈ ಒಕ್ಕೂಟ ಒಟ್ಟು 22 ಸದಸ್ಯ ರಾಷ್ಟ್ರಗಳನ್ನ ಹೊಂದಿದೆ. ಸದಸ್ಯ ರಾಷ್ಟ್ರಗಳು ಆರ್ಥಿಕ ಹಾಗೂ ಸೇನಾ ನೆರವು ಸೇರಿದಂತೆ ಇತರ ಸಮಸ್ಯೆಗಳಿಗೆ ಸಹಕಾರ ನೀಡೋದಾಗಿ ಪ್ರತಿಜ್ಞೆ ಮಾಡಿವೆ.

-masthmagaa.com

Contact Us for Advertisement

Leave a Reply