ಉತ್ತರಾಖಂಡ UCC ಬಿಲ್‌ ಮಂಡನೆಗೆ ಕಿಡಿಕಾರಿದ ಅಸಾದುದ್ದೀನ್‌ ಓವೈಸಿ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಬಿಲ್‌ ಪಾಸ್‌ ಆಗಿದೆ. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಯುಸಿಸಿ ಬಿಲ್‌ ಪಾಸ್‌ ಮಾಡಿದ ರಾಜ್ಯ ಅಂತ ಉತ್ತರಖಂಡ ಕರೆಸಿಕೊಂಡಿದೆ. ಗೋವಾದಲ್ಲಿ ಈ ಮುಂಚೆ ಇತ್ತು. ಆದ್ರೆ ಅದು ಗೋವಾ ಸ್ವತಂತ್ರ ಪೂರ್ವಕ್ಕೂ ಮೊದಲೇ ಇದ್ದಿದ್ದರಿಂದ ಅದನ್ನ ಹಾಗೇ ಕಂಟಿನ್ಯೂ ಮಾಡ್ಕೊಂಡು ಬರಲಾಗಿತ್ತು. ಈಗ ಉತ್ತರಖಂಡದಲ್ಲೂ ಪಾಸ್‌ ಆಗಿದೆ. ಈ ಮೂಲಕ ಗೋವಾ ಬಳಿಕ ಉತ್ತರಖಂಡ ರಾಜ್ಯ ಏಕರೂಪ ನಾಗರಿಕ ಸಂಹಿತೆ ಅಳವಡಿಸಿಕೊಳ್ಳೋದು ಪಕ್ಕಾ ಆಗಿದೆ. ಇನ್ನು ಈ ಕುರಿತು ಮಾತಾಡಿರೋ AIMIM ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ʻಉತ್ತರಾಖಂಡದಲ್ಲಿ ಮಂಡಿಸಲಾದ ಬಿಲ್‌ ಎಲ್ಲಾ ಸಮುದಾಯಗಳು ಅನುಸರಿಸಬೇಕಾದ ʻಹಿಂದೂ ಕೋಡ್‌ʼ ಅಲ್ಲದೇ ಬೇರೇನೂ ಅಲ್ಲ. ಈ ಬಿಲ್‌ನಲ್ಲಿ ಹಿಂದೂಗಳು ಮತ್ತು ಬುಡಕಟ್ಟು ಜನಾಂಗದವ್ರಿಗೆ ವಿನಾಯಿತಿ ನೀಡಲಾಗಿದೆ. ಆದ್ರೆ ಮುಸ್ಲಿಂ ಸಮುದಾಯಕ್ಕೆ ಮಾತ್ರ ಬೇರೆ ಧರ್ಮ ಮತ್ತು ಸಂಸ್ಕೃತಿಯನ್ನ ಫಾಲೋ ಮಾಡುವಂತೆ ಫೋರ್ಸ್‌ ಮಾಡಲಾಗಿದೆ. ಇದು ನಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆʼ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply