ರಾಜಸ್ಥಾನದಲ್ಲಿ ಮತ್ತೇ ಅಧಿಕಾರಕ್ಕೆ ಬಂದ್ರೆ ಜಾತಿಗಣತಿ ಮಾಡ್ತೀವಿ: ಗೆಹ್ಲೋಟ್‌

masthmagaa.com:

ಪಂಚ ರಾಜ್ಯಗಳ ಚುನಾವಣಾ ಮಹಾ ಸಂಗ್ರಾಮದಲ್ಲಿಂದು ರಾಜಸ್ತಾನದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್‌ ಜಾತಿ ಜನಗಣತಿ ಅಸ್ತ್ರ ಪ್ರಯೋಗಿಸಿದೆ. ‘ನಾವ್‌ ಅಧಿಕಾರಕ್ಕೆ ಪುನಃ ಬಂದ್ರೆ ನಮ್ಮ ಪ್ರಣಾಳಿಕೆಯಲ್ಲಿನ ಶೇ.96ರಷ್ಟು ಯೋಜನೆಗಳನ್ನ ಕಾರ್ಯರೂಪಕ್ಕೆ ತರ್ತಿವಿ ಹಾಗೂ ಜಾತಿ ಜನಗಣತಿ ಮಾಡ್ತೀವಿ’ ಅಂತಾ ರಾಜಸ್ತಾನ ಸಿಎಂ ಅಶೋಕ್‌ ಗೆಹ್ಲೋಟ್‌ ಆಶ್ವಾಸನೆ ನೀಡಿದ್ದಾರೆ. ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥೆ ಖಾತೆಗೆ 10ಸಾವಿರ ಗೌರವ ಧನ, 1.4ಕೋಟಿ ಕುಟುಂಬಗಳಿಗೆ 500ರೂ ದರದಲ್ಲಿ ಸಿಲಿಂಡರ್‌ ವಿತರಣೆ, ಪ್ರತಿ ಕೆಜಿಗೆ 2ರೂಪಾಯಿಯಂತೆ ಜಾನುವಾರುಗಳು ಇರೋರ ಬಳಿಯಿಂದ ಸಗಣಿ ಖರೀದಿ, 25-50 ಲಕ್ಷದವೆರೆಗೆ ಚಿರಂಜೀವಿ ಆರೋಗ್ಯ ವಿಮೆ, ಸರ್ಕಾರಿ ನೌಕರರಿಗೆ ವೃದ್ಧಾಪ್ಯ ಪಿಂಚಣಿ ಯೋಜನೆ, ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಫ್ರಿ ಲ್ಯಾಪ್‌ಟಾಪ್‌, ನೈಸರ್ಗಿಕ ವಿಪತ್ತಿಗೆ ತುತ್ತಾದ ಕುಟುಂಬಗಳಿಗೆ 15 ಲಕ್ಷದವೆರಗೆ ವಿಮಾ ಯೋಜನೆ ಸೇರಿದಂತೆ ಪಂಚಾಯತಿ ಮಟ್ಟದಲ್ಲಿ ಹೊಸ ಯೋಜನೆಗಳನ್ನ ಜಾರಿ ಮಾಡ್ತೀವಿ ಅಂತ ಭರವಸೆ ನೀಡಲಾಗಿದೆ. ಒಟ್ನಲ್ಲಿ ಈ ರೀತಿ ಕರ್ನಾಟಕ ಮಾದರಿಯಲ್ಲಿ ಚುನಾವಣೆ ಗೆಲ್ಲೋಕೆ ಕೈ ಪಡೆ ಪ್ಲಾನ್‌ ಮಾಡ್ಕೊಂಡಿದೆ.

-masthmagaa.com

Contact Us for Advertisement

Leave a Reply