ರೋಚಕ ಹಣಾಹಣಿಯಲ್ಲಿ ಬಾಂಗ್ಲಾವನ್ನ ಬಗ್ಗುಬಡಿದ ಲಂಕಾ, ಸೂಪರ್‌-4ಗೆ ಪ್ರವೇಶ!

masthmagaa.com:

ಏಷ್ಯಾಕಪ್‌ನ ʻಬಿʼ ಗ್ರೂಪ್‌ನ ರೋಚಕ ಹಣಾಹಣಿಯಲ್ಲಿ ಅತಿಥೇಯ ಲಂಕಾ ಬಾಂಗ್ಲಾದೇಶವನ್ನ ಮಣಿಸಿ ಮನೆಗೆ ಕಳಿಸಿದೆ. ಕೊನೇ ಓವರ್‌ವರೆಗು ಅತ್ಯಂತ ಥ್ರಿಲ್ಲಿಂಗ್‌ ಆಗಿದ್ದ ಈ ಪಂದ್ಯದಲ್ಲಿ ಲಂಕಾ ಎರಡು ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 20 ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 183 ರನ್‌ಗಳಿಸ್ತು. ಎಂಟು ವಿಕೆಟ್‌ ಕಳ್ಕೊಂಡ್ರು ಕೂಡ ಲಂಕಾ ಇದನ್ನ ನಾಲ್ಕು ಬಾಲ್‌ಗಳು ಬಾಕಿ ಇರುವಂತೆಯೇ ಚೇಸ್‌ ಮಾಡ್ತು. ನಾಲ್ಕು ನೋಬಾಲ್‌ಗಳು ಸೇರಿದಂತೆ 17 ಎಕ್ಸ್‌ಟ್ರಾ ರನ್‌ಗಳನ್ನ ಲಂಕಾಗೆ ನೀಡಿದ್ದು ಬಾಂಗ್ಲಾಗೆ ದುಬಾರಿಯಾಗಿ ಪರಿಣಮಿಸ್ತು. ಈ ಮೂಲಕ ʻಬಿʼ ಗುಂಪಿನಲ್ಲಿ ಅಫ್ಘಾನ್‌ ಜೊತೆಗೆ ಲಂಕಾ ಸೂಪರ್‌-4ಗೆ ಲಗ್ಗೆಯಿಟ್ಟಿದೆ.

-masthmagaa.com

Contact Us for Advertisement

Leave a Reply