ಏಷ್ಯಾಕಪ್:‌ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಪಾಕ್‌ ಬಾಬರ್

masthmagaa.com:

2023ರ ಏಷ್ಯಾಕಪ್‌ನಲ್ಲಿ ತನ್ನ ಅಜೇಯ ಓಟವನ್ನ ಮುಂದುವರೆಸಿರುವ ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧ ನಡೆದ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ 17 ರನ್​ಗಳ ಇನ್ನಿಂಗ್ಸ್ ಆಡಿದ ನಾಯಕ ಬಾಬರ್ ಆಜಮ್‌, ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ವಿಶ್ವ ದಾಖಲೆಯನ್ನ ಮುರಿದಿದ್ದಾರೆ. ಕಳೆದ ವಾರ ಮುಲ್ತಾನ್‌ನಲ್ಲಿ ನಡೆದ ನೇಪಾಳ ವಿರುದ್ಧ ಆರಂಭಿಕ ಪಂದ್ಯದಲ್ಲಿ 151 ರನ್​ಗಳ ಇನ್ನಿಂಗ್ಸ್ ಆಡಿದ್ದ ಬಾಬರ್, ಬಾಂಗ್ಲಾದೇಶದ ವಿರುದ್ಧ 17 ರನ್ ಗಳಿಸಿ ಏಕದಿನ ಇತಿಹಾಸದಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ.

masthmagaa.com

Contact Us for Advertisement

Leave a Reply