ಪಾಕಿಸ್ತಾನ ಏಷ್ಯಾದಲ್ಲೇ ದುಬಾರಿ ದೇಶ: ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್

masthmagaa.com:

ಏಷ್ಯಾದಲ್ಲಿ ವಾಸ ಮಾಡೋಕೆ ಯೋಗ್ಯವಾಗಿರೋ ದೇಶಗಳ ಪೈಕಿ, ನೆರೆಯ ಪಾಕಿಸ್ತಾನ ಅತ್ಯಂತ ದುಬಾರಿ ದೇಶ ಅನ್ನೋ ರಿಪೋರ್ಟ್‌ ಒಂದು ಬಂದಿದೆ. ಏಶಿಯನ್‌ ಡೆವೆಲಪ್‌ಮೆಂಟ್‌ ಬ್ಯಾಂಕ್ ಈ ರಿಪೋರ್ಟ್‌ ರಿಲೀಸ್‌ ಮಾಡಿದೆ. ಅಲ್ದೇ ಪಾಕಿಸ್ತಾನದ ಜನ ಸದ್ಯ 25% ಹಣದುಬ್ಬರದ ಜೊತೆ ಜೀವನ ಮಾಡ್ತಿದ್ದಾರೆ. ಇದು ಈ ಪ್ರದೇಶದಲ್ಲಿನ 46 ದೇಶಗಳ ಪೈಕಿ ಅತಿ ಹೆಚ್ಚು ಹಣದುಬ್ಬರ ಅಂತೇಳಿದೆ. ಅಲ್ಲದೆ ಪಾಕ್‌ ಎಕಾನಮಿಯ ಬೆಳವಣಿಗೆ ದರ ಸುಮಾರು 1.9% ಇರಲಿದೆ. ಈ ಪ್ರದೇಶದಲ್ಲಿ ಇದು ನಾಲ್ಕನೆ ಅತೀ ಕಡಿಮೆ ಬೆಳವಣಿಗೆ ದರ ಇರೋ ಎಕಾನಮಿ ಅಂತೇಳಿದೆ. ಆ ಮೂಲಕ ಆರ್ಥಿಕತೆ ಲೆಕ್ಕದಲ್ಲಿ ಮಯನ್ಮಾರ್‌, ಅಜರ್‌ಬಾಯಿಜಾನ್‌ ಹಾಗೂ ನೌರುಗಳ ನಂತರದ ಸ್ಥಾನಕ್ಕೆ, ಈಪಾಟಿ ಪಾಕಿಸ್ತಾನ ಬಂದು ಕೂತಿದೆ. ಇನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಪಾಕಿಸ್ತಾನ್‌ ಈಗ ಬರೋಬ್ಬರಿ 22% ಬಡ್ಡಿ ವಿಧಿಸ್ತಿದೆ. ಇಷ್ಟಾದ್ರೂ ಪಾಕಿಸ್ತಾನ ಹಣದುಬ್ಬರವನ್ನ 21%ಗೆ ಇಳಿಸೋ ಟಾರ್ಗೆಟ್‌ನ್ನೂ ಮಿಸ್‌ ಮಾಡಿಕೊಳ್ಳಲಿದೆ ಅಂತ ADB ಹೇಳಿದೆ. ಅಲ್ಲದೆ ಹೊರಗಿನಿಂದ ಸಿಗೋ ಸಾಲಗಳು ಹಾಗೂ ಈಗಾಗ್ಲೆ ಇರೋ ಹಳೇ ಸಾಲಗಳು ಪಾಕಿಸ್ತಾನಕ್ಕೆ ಬಹಳ ಸಮಸ್ಯೆ ತರಲಿವೆ ಅಂತ ಈ ಬ್ಯಾಂಕ್‌ ತನ್ನ ರಿಪೋರ್ಟ್‌ನಲ್ಲಿ ತಿಳಿಸಿದೆ.

-masthmagaa.com

Contact Us for Advertisement

Leave a Reply