ಏಷ್ಯನ್‌ ಗೇಮ್ಸ್‌: ಪದಕಪಟ್ಟಿಯಲ್ಲಿ 5ನೆ ಸ್ಥಾನಕ್ಕೇರಿದ ಭಾರತ

masthmagaa.com:

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಯಶಸ್ವಿಯಾಗಿ ಮುನ್ನಗ್ಗುತ್ತಿದ್ದಾರೆ. ಇದೀಗ ಭಾರತಕ್ಕೆ ಮತ್ತೊಂದು ಗೋಲ್ಡ್‌ ಮೆಡಲ್‌ ಸಿಕ್ಕಿದ್ದು, 10 ಮೀಟರ್ ಏರ್‌ ಬಂದೂಕು ವಿಭಾಗದಲ್ಲಿ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ರಮಿತಾ ಜಿಂದಾಲ್‌ 10 ಮೀಟರ್‌ ಏರ್‌ ರೈಫಲ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಮೆಡಲ್‌ ಪಟ್ಟಿಯಲ್ಲಿ 6 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 10 ಕಂಚಿನ ಪದಕಗಳು ಸೇರಿ ಒಟ್ಟು 24 ಮೆಡಲ್‌ಗಳೊಂದಿಗೆ ಭಾರತ 5ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply