ಏಷ್ಯನ್‌ ಗೇಮ್ಸ್‌: 41 ವರ್ಷಗಳ ನಂತರ ಹಾರ್ಸ್‌ ರೈಡಿಂಗ್‌ನಲ್ಲಿ ಭಾರತಕ್ಕೆ ಸ್ವರ್ಣ ಪದಕ

masthmagaa.com:

ಚೀನಾದ ಹ್ಯಾಂಗ್‌ಝವನಲ್ಲಿ ನಡೆಯುತ್ತಿರೊ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಮೊದಲ ಬಾರಿಗೆ ಹಾರ್ಸ್‌ ರೈಡಿಂಗ್‌ಗೆ ಸಂಬಂಧಿಸಿದ ಅಕ್ವಸ್ಟ್ರಿಯನ್‌ (equestrian) ಸ್ಪೋರ್ಟ್‌ನಲ್ಲಿ ಭಾರತ ತಂಡ ಚಿನ್ನಕ್ಕೆ ಮುತ್ತಿಕ್ಕಿದೆ. 1982ರ ನಂತರ ಅಂದ್ರೆ 41 ವರ್ಷಗಳಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದೆ. ಇತ್ತ ಸೇಲಿಂಗ್‌ ಅಥ್ವಾ ನೌಕಾಯಾನ ಸ್ಪರ್ಧೆಯಲ್ಲಿ ಭಾರತ ಎರಡು ಪದಕಗಳನ್ನ ತನ್ನದಾಗಿಸಿಕೊಂಡಿದೆ. ಇಂದು ನಡೆದ ಈ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ 17ರ ಹರೆಯದ ನೇಹಾ ಠಾಕೂರ್‌ ಬೆಳ್ಳಿ ಪದಕ ಗೆದ್ರೆ, ಪುರುಷರ ವಿಭಾಗದಲ್ಲಿ ಇಯಾಬಾದ್‌ ಅಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಪದಕ ಪಟ್ಟಿಯಲ್ಲಿ 3 ಚಿನ್ನದ ಪದಕ, 4 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕಗಳು ಸೇರಿ ಒಟ್ಟು 13 ಮೆಡಲ್‌ಗಳೊಂದಿಗೆ ಭಾರತ 6ನೇ ಸ್ಥಾನದಲ್ಲಿದೆ.

-masthmagaa.com

Contact Us for Advertisement

Leave a Reply