ಅಸ್ಸಾಂ: ಜೈಲಿನಲ್ಲಿರುವ ಖಲಿಸ್ತಾನಿ ಬೆಂಬಲಿಗರಿಗೆ ಸ್ಮಾರ್ಟ್‌ ಉಪಚಾರ!

masthmagaa.com:

ಖಲಿಸ್ತಾನಿ ಬೆಂಬಲಿಗ, ಛೋಟಾ ಬಿಂದ್ರನ್‌ವಾಲೆ ಅಂತ್ಲೇ ಕರೆಸಿಕೊಳ್ಳೋ ಸಿಖ್‌ ಬೋಧಕ ಅಮ್ರಿತ್‌ಪಾಲ್‌ಸಿಂಗ್‌ ಹಾಗೂ ಅವನ ಸಹಚರರಿಗೆ ಜೈಲಲ್ಲಿ ಸ್ಮಾರ್ಟ್‌ ಟಿವಿ ಕೊಡಲಾಗಿದೆ. ಅಸ್ಸಾಂನ ದಿಬ್ರುಘರ್‌ ಸೆಂಟ್ರಲ್‌ ಜೈಲ್‌ SP ಈ ವಿಚಾರವನ್ನ ಹೇಳಿದ್ದಾರೆ. ನ್ಯಾಷನಲ್‌ ಸೆಕ್ಯುರಿಟಿ ಆಕ್ಟ್‌ (NSA) ಅಡಿಯಲ್ಲಿ ಬಂಧಿಯಾಗಿರೋ ಇವ್ರು ಸ್ಮಾರ್ಟ್‌ ಟಿವಿ ಹಾಗೂ LCDಯ ಬೇಡಿಕೆ ಇಟ್ಟಿದ್ರು. ಅದರಂತೆ ಅವರಿಗೆ ಟಿವಿ ಒದಗಿದಲಾಗಿದೆ. ಆದ್ರೆ ಅವರ ಕೇಸ್‌ಗೆ ಸಂಬಂಧಿಸಿದ ವಿಚಾರಗಳಿರೋ ಪೆನ್‌ಡ್ರೈವ್‌ ನೀಡಲಾಗಿದೆ ಅನ್ನೋ ಸುದ್ದಿ ಹರಿದಾಡಿದೆ. ಇದು ಸುಳ್ಳು ಸುದ್ದಿ ಅಂತ ಈ ಅಧಿಕಾರಿ ಹೇಳಿಕೆ ನೀಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲೇ ಅವಶ್ಯಕ ಫಾರ್ಮಾಲಿಟಿಗಳನ್ನ ಕ್ಲಿಯರ್‌ ಮಾಡಿ ಇವರಿಗೆ ಟಿವಿ ಒದಗಿಸಲಾಗಿತ್ತು ಅಂದಿದ್ದಾರೆ. ಅಂದ್ಹಾಗೆ ಇತ್ತಿಚೆಗಷ್ಟೇ ಇದೇ ಜೈಲ್‌ನ NSA ಸೆಲ್‌ನಲ್ಲಿ ಒಂದು ಸ್ಮಾರ್ಟ್‌ಫೋನ್‌, ಕೆಲವು ಪೆನ್‌ ಡ್ರೈವ್‌ಗಳು, ಬ್ಲೂಟೂತ್‌ ಹೆಡ್‌ಫೋನ್‌ ಮುಂತಾದ ಎಲೆಕ್ಟ್ರಿಕ್‌ ವಸ್ತುಗಳು ಸಿಕ್ಕಿದ್ವು. ಅದಾದ ನಂತರ ಜೈಲಿನ ಪಬ್ಲಿಕ್‌ ಏರಿಯಾದಲ್ಲಿ ಹಲವು ಸಿಸಿಟಿವಿ ಕ್ಯಾಮೆರಾಗಳನ್ನ ಇನ್‌ಸ್ಟಾಲ್‌ ಮಾಡಿ ಸೆಕ್ಯೂರಿಟಿ ಜಾಸ್ತಿ ಮಾಡಲಾಗಿತ್ತು. ಇದೀಗ ಈ ಟಿವಿ ವಿಚಾರ ಬಯಲಾಗಿದೆ.

-masthmagaa.com

Contact Us for Advertisement

Leave a Reply