ಏಕದಿನ ಕ್ರಿಕೆಟ್‌ಗೆ ಫಿಂಚ್‌ ನಿವೃತ್ತಿ! ಫೈನಲ್‌ಗೂ ಮುನ್ನ ಪಾಕ್‌ಗೆ ಮುಖಭಂಗ!

masthmagaa.com:

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಆ್ಯರೊನ್ ಫಿಂಚ್ ದಿಢೀರ್‌ ಆಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸೆಪ್ಟಂಬರ್‌ 11ರಂದು ನ್ಯೂಜಿಲ್ಯಾಂಡ್‌ ತಂಡದ ಎದುರು ಫಿಂಚ್‌ ತಮ್ಮ ಕೊನೆಯ ಏಕದಿನ ಪಂದ್ಯ ಆಡಲಿದ್ದಾರೆ. ಆದ್ರೆ ಈ ವರ್ಷ ಆಸ್ಟ್ರೇಲಿಯಾದಲ್ಲೇ ನಡೆಯಲಿರೊ ICC T20 ವಿಶ್ವಕಪ್‌ನಲ್ಲಿ ತಂಡವನ್ನ ಮುನ್ನಡೆಸಲಿದ್ದಾರೆ. ಅಂದಹಾಗೆ ಆಸ್ಟ್ರೇಲಿಯಾ ತಂಡದ ಪರ ಫಿಂಚ್‌ ಒಟ್ಟು 145 ಏಕದಿನ ಪಂದ್ಯಗಳನ್ನ ಆಡಿದ್ದು, 5,401 ರನ್‌ಗಳಿಸಿದ್ದಾರೆ. ಇದ್ರಲ್ಲಿ 17 ಶತಕಗಳು ಸೇರಿಕೊಂಡಿವೆ. ಇನ್ನೊಂದ್‌ ಕಡೆ ಏಷ್ಯಾ‌ ಕಪ್‌ನ ಸೂಪರ್‌-4 ಹಂತದ ಕೊನೆಯ ಪಂದ್ಯದಲ್ಲಿ ಪಾಕ್‌ ವಿರುದ್ದ ಶ್ರೀಲಂಕಾ 5 ವಿಕೆಟ್‌ಗಳ ಸುಲಭ ಗೆಲುವು ಪಡೆದಿದೆ. ಪಾಕ್‌ ತಂಡವನ್ನ 19.1 ಓವರ್‌ಗಳಿಗೆ 121 ರನ್‌ಗೆ ಆಲ್‌ಔಟ್‌ ಮಾಡಿದ್ದ ಲಂಕಾ ತಂಡ ಅಂತಿಮವಾಗಿ ಸೂಪರ್‌ 4 ಪಂದ್ಯದಲ್ಲಿ ಸೋಲೆ ಕಾಣದೇ ʼಕಪ್‌ʼ ಗೆಲ್ಲುವ ಫೇವರೆಟ್‌ ತಂಡವಾಗಿ ಕಾಣಿಸಿಕೊಂಡಿದೆ. 122 ರನ್‌ಗಳ ಗುರಿಯನ್ನ ಬೆನ್ನತ್ತಿದ ಲಂಕಾ, ಕೇವಲ 17 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 124 ರನ್‌ ಬಾರಿಸಿ ಪಾಕ್‌ ತಂಡವನ್ನ ಮಣಿಸಿದೆ. ಇನ್ನು ನಾಳೆ ಇದೇ ತಂಡಗಳು ಫೈನಲ್‌ನಲ್ಲೂ ಮುಖಾಮಖಿಯಾಗ್ತಿದ್ದುಇದಕ್ಕೂ ಮೊದಲೇ ಪಾಕ್‌ಗೆ, ಲಂಕಾ ತಂಡ ಬೆವರಿಳಿಸಿದೆ.

-masthmagaa.com

Contact Us for Advertisement

Leave a Reply