ಡಿಸೆಂಬರ್‌ 29ರಂದು ಆಟೋ ಸಂಚಾರ ಬಂದ್!‌ ಆಟೋ ಚಾಲಕರಿಂದ ಮುಷ್ಕರಕ್ಕೆ ಕರೆ!

masthmagaa.com:

ಸಿಲಿಕಾನ್‌ ಸಿಟಿ ಬೆಂಗಳೂರಿನ ಜನರಿಗೆ ವರ್ಷದ ಕೊನೆಯಲ್ಲಿ ಆಟೋ ಚಾಲಕರು ಶಾಕ್‌ ನೀಡಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್‌ 29ರಂದು ಆಟೋ ಸಂಚಾರ ಬಂದ್‌ ಮಾಡೋಕೆ ತೀರ್ಮಾನಿಸಿದ್ದಾರೆ. ರ್ಯಾಪಿಡೋ ಬೈಕ್‌, ಟ್ಯಾಕ್ಸಿಯನ್ನ ಬ್ಯಾನ್‌ ಮಾಡಬೇಕು. ಬೌನ್ಸ್‌ ಎಲೆಕ್ಟ್ರಿಕ್‌ ಬೈಕ್‌ಗೆ ಸಾರಿಗೆ ಇಲಾಖೆ ನೀಡಿರೊ ಅನುಮತಿ ತೆಗೆದು ಹಾಕ್ಬೇಕು ಅಂತ ಆಗ್ರಹಿಸಿ ಬೃಹತ್‌ ಪ್ರತಿಭಟನೆಗೆ ಕರೆ ನೀಡಲಾಗಿದೆ. ಡಿಸೆಂಬರ್‌ 29ಕ್ಕೆ ಸಂಪೂರ್ಣ ಆಟೋ ಓಡಾಟ ಸ್ಥಗಿತಗೊಳಿಸೋಕೆ ತೀರ್ಮಾನಿಸಿದ್ದು, ಇದಕ್ಕೆ ಬರೊಬ್ಬರಿ 2 ಲಕ್ಷ ಆಟೋ ಚಾಲಕರು ಬೆಂಬಲ ಸೂಚಿಸಿದ್ದಾರೆ.

-masthmagaa.com

Contact Us for Advertisement

Leave a Reply