AUKUS ರಕ್ಷಣಾ ಮೈತ್ರಿಕೂಟಕ್ಕೆ ಮತ್ತಷ್ಟು ಬಲ: ಚೀನಾಗೆ ಟೆನ್ಷನ್!

masthmagaa.com:

ಇಂಡೋ ಪೆಸಿಫಿಕ್​ ಭಾಗದಲ್ಲಿ ಚೀನಾವನ್ನ ಕಟ್ಟಿಹಾಕಲು ಆಸ್ಟ್ರೇಲಿಯಾ, ಅಮೆರಿಕ ಮತ್ತು ಯುನೈಟೆಡ್​ ಕಿಂಗ್ಡಮ್​ – ಈ ಮೂರು ದೇಶಗಳು ಮಾಡಿಕೊಂಡಿದ್ದ ‘ಆಕುಸ್​’ ರಕ್ಷಣಾ ಮೈತ್ರಿಕೂಟಕ್ಕೆ ಮತ್ತಷ್ಟು ಬಲ ಬಂದಿದೆ. ಮೂರು ದೇಶಗಳು ಈಗ ಹೈಪರ್​ಸಾನಿಕ್​ ಆಯುಧ ಮತ್ತು ಎಲೆಕ್ಟ್ರಾನಿಕ್​ ವಾರ್​ಫೇರ್​ ಕೇಪಬಲಿಟೀಸ್​ ಕ್ಷೇತ್ರದಲ್ಲೂ ಪರಸ್ಪರ ಸಹಕರಿಸಲು ನಿರ್ಧರಿಸಿವೆ. ​ಈ ಸಂಬಂಧ ಮೂರು ದೇಶಗಳು ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 2021ರ ಸೆಪ್ಟೆಂಬರ್​ನಲ್ಲಿ ಆಕುಸ್​ ರಕ್ಷಣಾ ಮೈತ್ರಿಕೂಟವನ್ನ ಮಾಡಿಕೊಳ್ಳಲಾಗಿತ್ತು. ಸೈಬರ್​, ಆರ್ಟಿಫಿಷಿಯಲ್​ ಇಂಟಲಿಜೆನ್ಸ್​, ಕ್ವಾಂಟಮ್​ ಟೆಕ್ನಾಲಜೀಸ್​, ಅಂಡರ್​ಸೀ ಕೇಪಬಲಿಟೀಸ್​ ಕ್ಷೇತ್ರದಲ್ಲಿ ಪರಸ್ಪರ ಸಹಕರಿಸೋದು ಈ ಮೈತ್ರಿಕೂಟದ ಉದ್ದೇಶ. ಇದರಲ್ಲಿ ಪರಮಾಣು ಚಾಲಿತ ಜಲಾಂತರ್ಗಾಮಿ ತಂತ್ರಜ್ಞಾನವನ್ನ ಶೇರ್​ ಮಾಡಿಕೊಳ್ಳೋದು ಸೇರಿತ್ತು. ಇದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಈಗ ಹೆಚ್ಚುವರಿಯಾಗಿ ಹೈಪರ್​ಸಾನಿಕ್​ ಮತ್ತು ಎಲೆಕ್ಟ್ರಾನಿಕ್​ ವಾರ್​ಫೇರ್​ ಕೇಪಬಲಿಟೀಸ್ ಅನ್ನ ಆಕುಸ್​ಗೆ ಸೇರಿಸಿಕೊಂಡಿರೋದು ಚೀನಾ ಸಿಟ್ಟು ಮತ್ತಷ್ಟು ಹೆಚ್ಚಾಗುವಂತೆ ಮಾಡೋದು ಗ್ಯಾರಂಟಿ.

-masthmagaa.com

Contact Us for Advertisement

Leave a Reply