ಮಕ್ಕಳಿಗೆ ₹500 ಕೋಟಿ ಷೇರು ಹಂಚಲಿರೋ ಅಜೀಂ ಪ್ರೇಮ್‌ಜಿ!

masthmagaa.com:

ವಿಪ್ರೋ ಸಂಸ್ಥೆಯ ಮಾಜಿ ಛೇರ್ಮನ್ ಅಜೀಮ್ ಪ್ರೇಮ್​ಜಿ ಭಾರತದ ಅತಿದೊಡ್ಡ philanthropher ದಾನವಂತರಲ್ಲಿ ಒಬ್ಬರು. ತಮ್ಮ ಸಂಪಾದನೆಯ ಬಹುಭಾಗವನ್ನ ಅವ್ರು ಸಾಮಾಜಿಕ ಕಾರ್ಯಗಳಿಗೆ‌ ಕೊಡ್ತಾರೆ. ಇದೀಗ ಅವ್ರು ತಮ್ಮ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳನ್ನು ದಾನವಾಗಿ ವರ್ಗಾಯಿಸಿದ್ದಾರೆ. ಎನ್ಎಸ್ಇಗೆ ಸಲ್ಲಿಸಿದ ಫೈಲಿಂಗ್​ನಲ್ಲಿ ವಿಪ್ರೋ ಈ ಮಾಹಿತಿ ನೀಡಿದೆ. ಅದರ ಪ್ರಕಾರ ಅಜೀಮ್ ಪ್ರೇಮ್​ಜಿ ತಮಗೆ ಸೇರಿದ ಷೇರುಪಾಲಿನ ಪೈಕಿ 1,02,30,180 (ಸುಮಾರು 1 ಕೋಟಿ) ಷೇರುಗಳನ್ನ ತಮ್ಮಿಬ್ಬರು ಮಕ್ಕಳಾದ ರಿಷದ್ ಪ್ರೇಮ್​ಜಿ ಮತ್ತು ತಾರಿಖ್ ಪ್ರೇಮ್​ಜಿ ಅವರಿಗೆ ದಾನವಾಗಿ ನೀಡಿದ್ದಾರೆ. ಅಜೀಮ್ ಹಶೀಮ್ ಪ್ರೇಮ್​ಜಿ ಗುಜರಾತ್ ಮೂಲದ ಶಿಯಾ ಮುಸ್ಲಿಮ್ ಕುಟುಂಬದ ಮೂಲದಿಂದ ಬಂದವರು. ಹುಟ್ಟಿದ್ದು ಬಾಂಬೆಯಲ್ಲಿ. ಅವರ ತಂದೆ ಮೊಹಮ್ಮದ್ ಹಶೀಮ್ ಪ್ರೇಮ್​ಜಿ ಸ್ವಾತಂತ್ರ್ಯಪೂರ್ವದಲ್ಲಿ ಪ್ರಖ್ಯಾತ ಉದ್ಯಮಿಯಾಗಿದ್ದರು. ದೇಶದ ವಿಭಜನೆ ಆಗುವಾಗ ಜಿನ್ನಾ ಮೊಹಮ್ಮದ್ ಪ್ರೇಮ್​ಜಿ ಅವರನ್ನ ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನಿಸಿದ್ದರಂತೆ. ಆದರೆ, ಪ್ರೇಮ್​ಜಿ ಈ ಆಫರ್ ಅನ್ನು ನಯವಾಗಿಯೇ ನಿರಾಕರಿಸಿದ್ದರು.

-masthmagaa.com

Contact Us for Advertisement

Leave a Reply