ಕರಗಿತು ರಿಷಿ ಸುನಾಕ್ ಶ್ರೀಮಂತಿಕೆ! ‌ಒಂದೇ ವರ್ಷದಲ್ಲಿ ₹2072,00,00,000 ನಷ್ಟ!

masthmagaa.com:

ಸೂಪರ್‌ ರಿಚ್‌ ಕಪಲ್‌ ಅಂತಾನೇ ಕರೆಸಿಕೊಳ್ಳುವ ಬ್ರಿಟನ್‌ನ ಪ್ರಧಾನಿ ರಿಷಿ ಸುನಾಕ್‌ ಹಾಗೂ ಪತ್ನಿ ಅಕ್ಷತಾ ಮೂರ್ತಿ ಅವರ ಸಂಪತ್ತಿನಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ ವರ್ಷ 201 ಮಿಲಿಯನ್‌ ಪೌಂಡ್ಸ್‌ ಅಂದ್ರೆ ಸುಮಾರು 2072 ಕೋಟಿ ರೂಪಾಯಿಯನ್ನ ಕಳೆದುಕೊಂಡಿದ್ದಾರೆ ಅಂತ ತಿಳಿದು ಬಂದಿದೆ. ಈ ಮೂಲಕ ʻThe Sunday Times Rich Listʼನಲ್ಲಿ ಸುನಾಕ್‌ ದಂಪತಿ, ಇದೀಗ 5 ಸ್ಥಾನ ಕುಸಿತಗೊಂಡು 227ಕ್ಕೆ ತಲುಪಿದ್ದಾರೆ. ಅಂದ್ಹಾಗೆ ಕಳೆದ ವರ್ಷ 690 ಮಿಲಿಯನ್‌ ಪೌಂಡ್ಸ್‌ನೊಂದಿಗೆ 222ನೇ ಸ್ಥಾನ ಪಡೆದುಕೊಂಡಿದ್ರು. ಆದ್ರೆ ಈ ವರ್ಷ ಅವರ ಸಂಪತ್ತು 529 ಮಿಲಿಯನ್‌ ಪೌಂಡ್ಸ್‌ಗೆ ಇಳಿಕೆಯಾಗಿದೆ. ಅಂದ್ಹಾಗೆ ಸುನಾಕ್‌ ದಂಪತಿ ಭಾರತೀಯ ಬ್ಯುಸಿನೆಸ್‌ ಮ್ಯಾನ್‌ ನಾರಾಯಣ ಮೂರ್ತಿ ಅವರ ಇನ್ಫೋಸಿಸ್‌ ಕಂಪನಿಯಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಹೆಚ್ಚಿನ ಸಂಪತ್ತು ಇನ್ಫೋಸಿಸ್‌ಗೆ ನೇರ ಸಂಬಂಧ ಹೊಂದಿದೆ. ಸೋ ಇನ್ಫೋಸಿಸ್‌ ಷೇರುಗಳಲ್ಲಿ ಕಳೆದ ವರ್ಷ ಸುಮಾರು 20% ಕುಸಿತ ಉಂಟಾಗಿತ್ತು. ಇದರ ಪರಿಣಾಮ ಸುನಾಕ್‌ ದಂಪತಿಯ ಸಂಪತ್ತಿನಲ್ಲಿ ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply