ಚೀನಾದಿಂದ ಇಡೀ ಜಗತ್ತಿಗೆ ಮತ್ತೊಂದು ಅಪಾಯ!

masthmagaa.com:

ಚೀನಾ ಮತ್ತೊಮ್ಮೆ ಜಗತ್ತಿನ ಕೊರೋನಾ ಹಾಟ್‌ಸ್ಪಾಟ್‌ ಆಗಿ ಬದಲಾಗಲಿದೆ ಅನ್ನೊ ಅನುಮಾನ ದಟ್ಟವಾಗ್ತ ಇದೆ. ಇವರು ಕೊರೋನಾವನ್ನ ಕೊನೆಗಾಣಿಸಲು ಏನೆಲ್ಲ ಪ್ರಯತ್ನ ಪಟ್ರು ಕೊರೋನಾ ಮಾತ್ರ ಕಮ್ಮಿ ಆಗ್ತಇಲ್ಲ. ಆದ್ರೆ ಜನರು ಮಾತ್ರ ಚೀನಾದ ಜೀರೋ ಕೊರೋನಾ ಪಾಲಿಸಿಯಿಂದ ಹೈರಾಣಾಗಿ ಹೋಗಿದ್ದಾರೆ. ಇದೀಗ ಚೀನಾದ ಬೀಜಿಂಗ್‌ನಲ್ಲಿ ಅಧಿಕಾರಿಗಳು ಸಾರ್ವಜನಿಕವಾಗಿ ದೊಡ್ಡ ಸಂಖ್ಯೆಯಲ್ಲಿ ಜನರಿಗೆ ಕೊರೋನಾ ಪರೀಕ್ಷೆ ನಡೆಸ್ತಾ ಇದ್ದಾರೆ. ಇದರಿಂದ ಬೀಜಿಂಗ್‌ ಜನತೆ ಹೆದರಿಹೋಗಿದ್ದಾರೆ. ಎಲ್ಲಿ ಇಲ್ಲಿಕೂಡ ಶಾಂಘೈನಂತೆ ವಾರ, ತಿಂಗಳು ಗಟ್ಲೆ ಲಾಕ್‌ಡೌನ್‌ ಮಾಡ್ತಾರೊ, ತಿನ್ಲಿಕ್ಕೆ ಒಳ್ಳೆಯ ಆಹಾರ ಸಿಗಲ್ವೊ ಅಂತ ಜನ ಪ್ಯಾನಿಕ್‌ ಬಯ್ಯಿಂಗ್‌ ಮಾಡ್ತಾ ಇದ್ದಾರೆ. ಅಂದ್ರೆ ಮತ್ತೆ ವಸ್ತುಗಳು ಸಿಗುತ್ತೋ ಇಲ್ವೋ ಅಂತ ಲೋಡ್‌, ಲೋಡ್‌ ಗಟ್ಲೆ ವಸ್ತುಗಳನ್ನ ಖರೀದಿಸೋದು. ಅಂದ್ಹಾಗೆ ಚೀನಾದಲ್ಲಿ ಕಳೆದ 24 ಗಂಟೆಯಲ್ಲಿ 20,261 ಕೊರೋನಾ ಕೇಸ್​ ದೃಢಪಟ್ಟಿದೆ. ಇದರಲ್ಲಿ ರೋಗದ ಲಕ್ಷಣ ಇರೋ 2,680 ಕೇಸ್​​ಗಳನ್ನ ಮಾತ್ರ ಚೀನಾ ಪಾಸಿಟಿವ್​ ಅಂತ ಪರಿಗಣಿಸುತ್ತೆ. ಕಳೆದ 24 ಗಂಟೆಯಲ್ಲಿ 51 ಸಾವು ಸಂಭವಿಸಿದೆ.

-masthmagaa.com

Contact Us for Advertisement

Leave a Reply