ಬೆಳಗಾವಿಯಲ್ಲೂ ಸದ್ದು ಮಾಡಿದ ಲವ್‌ ಜಿಹಾದ್‌: ಇಬ್ಬರ ಬಂಧನ!

masthmagaa.com:

ಅತ್ತ ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಕೇಸ್‌ ತೀವ್ರ ಚರ್ಚೆಯಲ್ಲಿದ್ರೆ ಇತ್ತ ಬೆಳಗಾವಿಯಲ್ಲಿ ಲವ್‌ ಜಿಹಾದ್‌ನ ಮತ್ತೊಂದು ಕರಾಳ ಮುಖ ಅನಾವರಣಗೊಂಡಿದೆ. ಹೌದು…ಹಿಂದೂ ಯುವತಿಯರನ್ನ ಮಾತ್ರವಲ್ಲ ಮದುವೆಯಾದ ಮಹಿಳೆಯರನ್ನು ಲವ್‌ ಜಿಹಾದ್‌ ಜಾಲಕ್ಕೆ ತಳ್ಳಲು ಯತ್ನಿಸಿರೊ ಘಟನೆ ವರದಿಯಾಗಿದೆ. ನೇಹಾ ಹತ್ಯೆ ಕೇಸ್‌ನ ಆರೋಪಿ ಫಯಾಜ್‌ ಹುಟ್ಟೂರು ಸವದತ್ತಿ ತಾಲೂಕಿನ ಮುನವಳ್ಳಿಯ ಹಿಂದೂ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ತನಗೆ ಕೆಲ್ಸ ಕೊಡಿಸೊ ಆಮಿಷವೊಡ್ಡಿ ಬೆಳಗಾವಿಗೆ ಕರೆ ತಂದು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸಲಾಗಿದೆ ಅಂತೇಳಿ ಸಂತ್ರಸ್ಥೆ 7 ಆರೋಪಿಗಳ ವಿರುದ್ದ ಸವದತ್ತಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಸದ್ಯ ಇಬ್ಬರು ಪ್ರಮುಖ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply